ಮಂಡ್ಯ :- ಹಳೇ ಮೈಸೂರು ಭಾಗದಲ್ಲಿ ಯಾವ ಒಕ್ಕಲಿಗ ನಾಯಕರು ಬೆಳೆಯಬಾರದು ಅವರ ಕುಟುಂಬದವರೇ ಎಲ್ಲಾ ಜಿಲ್ಲೆಗಳಲ್ಲಿ ಬೆಳೆಯಬೇಕೆಂಬ ದುರುದ್ದೇಶದಿಂದ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಮದ್ದೂರು ವಿಧಾನಸಭಾ ಕ್ಷೇತ್ರದ ಸಾದೊಳಲು, ಗೊರವನಹಳ್ಳಿ, ನಗರಕೆರೆ ಹಾಗೂ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದರು.
ಕರ್ನಾಟಕದ ಪ್ರಚಂಡ ಕುಳ್ಳ ನಿಧನ -ಡಾ. ತೋಂಟದ ಸಿಧ್ಧರಾಮ ಶ್ರೀಗಳ ಸಂತಾಪ!
ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ಮಂಡ್ಯ ಜನ್ರಿಗೆ ಮೋಸ ಮಾಡಿ ಹೋದೋರು ಈಗ ಮತ್ತೆ 5 ವರ್ಷದ ನಂತರ ಜಿಲ್ಲೆಯ ಜನತೆಯಲ್ಲಿ ಮತ ಕೇಳೋಕೆ ಬರ್ತಿದ್ದಾರೆ. ಅದ್ಯಾವ ಮುಖ ಹೊತ್ತು ಮತ ಕೇಳೋಕೆ ಬರ್ತಿದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ಅವರ ಅಧಿಕಾರದಲ್ಲಿದ್ದಾಗಲೇ ನಮ್ಮ ಜಿಲ್ಲೆಯ ಜನತೆ ನಮ್ಮ ಸ್ವಾಭಿಮಾನವನ್ನು ತೋರಿಸಿಕೊಟ್ಟಿದ್ದಾರೆ. ಅವತ್ತು 8 ಸಾವಿರ ಕೋಟಿ ರೂಪಾಯಿ ಅನುದಾನ ಕೊಡ್ತೀನಿ ಅಂತ ಹೇಳಿ ಸುಳ್ಳು ಭರವಸೆಗಳನ್ನು ನೀಡಿದ್ದರು. ಆದರೆ, ಯಾವುದೇ ಅನುದಾನವನ್ನು ಕೊಡ್ಲಿಲ್ಲ, ಶಾಶ್ವತ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಅವರ ಉದ್ದೇಶ ಹಳೇ ಮೈಸೂರು ಭಾಗದಲ್ಲಿ ಯಾವ ಒಕ್ಕಲಿಗ ನಾಯಕರು ಬೆಳೆಯಬಾರದು ಎಂಬುದು ಆದರೆ, ಜನತೆ ಇಂತಹ ನಿರ್ಧಾರಗಳನ್ನು ಒಪ್ಪೋದಿಲ್ಲ ಎಂದು ಕುಮಾರಸ್ವಾಮಿ ಟಾಂಗ್ ನೀಡಿದರು.
ನಮ್ಮ ಉದ್ಯಮಗಳನ್ನೆಲ್ಲ ಬಿಟ್ಟು ಕ್ಷೇತ್ರದಲ್ಲೇ ಉಳಿದುಕೊಂಡು ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದೇನೆ. ನನ್ನ ಹಾಗೂ ನಮ್ಮ ಸರ್ಕಾರದ ಮೇಲೆ ಕ್ಷೇತ್ರದ ಜನರು ವಿಶ್ವಾಸವಿಟ್ಟಿದ್ದಾರೆ. ನನ್ನ ಚುನಾವಣೆಯಲ್ಲಿ ನೀಡಿದ ಮತಗಳಿಗಿಂತ ಹೆಚ್ಚಿನ ಮತಗಳನ್ನು ಸ್ಟಾರ್ ಚಂದ್ರು ಅವರಿಗೆ ಕ್ಷೇತ್ರದ ಜನತೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ನಾಳೆ ಮಂಡ್ಯ ನಗರಕ್ಕೆ ರಾಹುಲ್ ಗಾಂಧಿ ಅವರು ಭೇಟಿ ನೀಡುತ್ತಿದ್ದು, ಅಂದಾಜು ಒಂದುವರೇ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು, ಕ್ಷೇತ್ರದ ಜನತೆ ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಕಾರ್ಯದರ್ಶಿ ಚಿದಂಬರ್, ಬ್ಲಾಕ್ ಕಾಂಗ್ರೆಸ್ ಕದಲೂರು ರಾಮಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಕಂಠಿಸುರೇಶ್, ಮುಖಂಡರಾದ ಗೊರವನಹಳ್ಳಿ ರಾಘವಾ, ಮಧು, ನ.ಲಿ.ಕೃಷ್ಣ, ನಾಗೇಶ್, ಪ್ರಭುಸ್ವಾಮಿ, ಧ್ರುವಕುಮಾರ್, ಹರೀಶ್, ಸಂದೀಪ್ ಸೇರಿದಂತೆ ಇತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ