ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಕೊಹ್ಲಿ ಫ್ಯಾನ್ಸ್ ಮನವಿ ಒಂದನ್ನು ಮಾಡಿಕೊಂಡಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಎಸ್ಆರ್ಹೆಚ್ ಬ್ಯಾಟರ್ಸ್ ಆರ್ಸಿಬಿ ಬೌಲರ್ಗಳ ಬೆವರಿಳಿಸಿದರು. ಇತ್ತ ಲಾಂಗ್ಆನ್ನಲ್ಲಿ ಫೀಲ್ಡಿಂಗ್ನಲ್ಲಿ ನಿಂತಿದ್ದ ವಿರಾಟ್ ಬೇಜಾರು ಮಾಡಿಕೊಂಡ್ರು. ತಮ್ಮ ಫ್ರಸ್ಟ್ರೇಷನ್ನ ವಿರಾಟ್ ಕೊಹ್ಲಿ ಹೊರಹಾಕಿದ್ರು. ಗ್ರೌಂಡ್ನಲ್ಲಿ ಗ್ರಾಸ್ಗೆ ಕಾಲಿನಿಂದ ಜಾಡಿಸಿ ಒದ್ದಿದ್ದಾರೆ. ಜೋರಾಗಿ ಕಿರುಚುತ್ತಾ ಬೇಸರ ಹೊರಹಾಕಿದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
ಮಲಗೋ ಮುನ್ನ ಬಾಳೆಹಣ್ಣು ತಿನ್ನೋ ಅಭ್ಯಾಸ ಇದೆಯಾ!? – ಹಾಗಿದ್ರೆ ಈ ಸುದ್ದಿ ನೋಡಿ!
ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಕೊಹ್ಲಿ ಫ್ಯಾನ್ಸ್ ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಕಳಿಸಿಬಿಡಿ ಅಂತಿದ್ದಾರೆ. ಈ ಥರ ಹಿಂಸೆ ಕೊಟ್ರೆ ಯಾರ್ ಬದುಕ್ತಾರೆ ಸಾರ್ ಅಂತ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೈದರಾಬಾದ್ಗೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಸನ್ರೈಸರ್ಸ್ ಹೈದರಾಬಾದ್ ಪರ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ 38, ಟ್ರಾವಿಸ್ ಹೆಡ್ 102, ಹೆನ್ರಿ ಕ್ಲಾಸೆನ್ 67, ಏಡನ್ ಮಾರ್ಕ್ರಾಮ್ 32, ಅಬ್ದುಲ್ ಸಮದ್ 37 ರನ್ ಗಳಿಸಿದರು