ಬೆಂಗಳೂರು:- ನಗರದ ಚಿಕ್ಕಜಾಲಾ ಪೊಲೀಸರು ಕಾರ್ಯಚರಣೆ ನಡೆಸಿ ವ್ಯಕ್ತಿಯೋರ್ವನ ಹತ್ಯೆಗೆ ಹೊಂಚು ಹಾಕಿ ಕಾಯುತ್ತಿದ್ದ ಮೂವರು ಸುಪಾರಿ ಹಂತಕರನ್ನು ಅರೆಸ್ಟ್ ಮಾಡಿದ್ದಾರೆ.
ಕೈ ನೋವಲ್ಲೂ ದ್ವಾರಕೀಶ್ ಗೆ ಅಂತಿಮ ನಮನ ಸಲ್ಲಿಸಲು ಬಂದ ಚಾಲೆಂಜಿಂಗ್ ಸ್ಟಾರ್!
ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿರುವ ಗಂಟಿಗಾನಹಳ್ಳಿಯಲ್ಲಿ ಮಂಕಿ ಕ್ಯಾಪ್ ಧರಿಸಿ, ಬೇಲಿ ಪೊದೆಯಲ್ಲಿ ಹೊಂಚು ಹಾಕಿ ಕುಳಿತಿದ್ದರು. ರಾತ್ರಿ ಗಸ್ತಿನಲ್ಲಿದ್ದ ಪಿಎಸ್ಐ ಶಿವಣ್ಣ ಎಂಬುವವರು ಅನುಮಾನಾಸ್ಪದವಾಗಿ ಅವಿತುಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಚಾರಣೆ ಬಳಿಕ ಹೇಮಂತ್ ರೆಡ್ಡಿ ಎಂಬುವವರು ಮೂರು ಲಕ್ಷ ರೂ. ಗೆ ಸುಫಾರಿ ನೀಡಿದ್ದು ಬಯಲಾಗಿದೆ. ಹೇಮಂತ್ ರೆಡ್ಡಿ ಸಂಬಂಧಿಯೊಂದಿಗೆ ಶಶಾಂಕ್ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಈ ಹಿನ್ನಲೆ ವ್ಯಕ್ತಿಯನ್ನ ಕೊಲೆ ಮಾಡಲು ಸುಫಾರಿ ನೀಡಿದ್ದರು. ಇದೀಗ ಹೇಮಂತ್ ರೆಡ್ಡಿ ಸೇರಿ ಮೂವರು ಸುಫಾರಿ ಹಂತಕರ ಬಂಧಿಸಲಾಗಿದೆ.
ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಶಶಾಂಕ್, ನಂತರ ಬೈಕ್ನಲ್ಲಿ ಎಂಟಿಗಾನಹಳ್ಳಿಯಲ್ಲಿರುವ ಮನೆಗೆ ತೆರಳುತ್ತಿದ್ದ. ಈ ವೇಳೆ ಆತನ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಅದರಂತೆ ಲಾಂಗು- ಮಚ್ಚುಗಳನ್ನು ಟಾಟಾ ಸುಮೋದಲ್ಲಿ ಅಡಗಿಸಿಟ್ಟು ಕಿಲ್ಲರ್ಸ್ ಗ್ಯಾಂಗ್ ಕಾಯುತ್ತಿದ್ದರು. ತಡರಾತ್ರಿ 1:30 ರ ಸುಮಾರಿಗೆ ಪೊಲೀಸರು ದಾಳಿ ನಡೆಸಿ ಆರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿ ಮೂವರನ್ನು ಬಂಧಿಸಲಾಗಿದೆ.