ಬೆಂಗಳೂರು:– ಬಿರು ಬೇಸಿಗೆಯಲ್ಲಿ ಮದ್ಯಪ್ರಿಯರು ಹಾಟ್ ಡ್ರಿಂಕ್ಸ್ ಬಿಟ್ಟು ಕೋಲ್ಡ್ ಬಿಯರ್ನತ್ತ ವಾಲಿದ್ದು ಕಳೆದ 11 ದಿನಗಳಲ್ಲಿ ರಾಜ್ಯದಲ್ಲಿ ಮಾರಾಟವಾದ ಬಿಯರ್ ಹಿಂದಿನ 3 ವರ್ಷಗಳ ದಾಖಲೆ ಮುರಿದಿದೆ.
ಬ್ರೇಕ್ ಫೇಲ್ ಆಗಿ ಖಾಸಗಿ ಬಸ್ ಪಲ್ಟಿ! – 20 ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ ಗಾಯ !
ಕಳೆದ 11 ದಿನಗಳಲ್ಲಿ ಬರೋಬ್ಬರಿ 17 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬಿಯರ್ ಮಾರಾಟದಲ್ಲಿ ಏರಿಕೆ ಕಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬಿಯರ್ ಮಾರಾಟದಲ್ಲಿಯೂ ಏರಿಕೆಯಾಗಿದ್ದು, ದಾಖಲೆ ಬರೆದಿದೆ. 27 ಲಕ್ಷದ 18 ಸಾವಿರದ 461 ಬಾಟಲ್ಗಳು ಮಾರಾಟವಾಗಿದ್ದರೆ ಇದರಿಂದ ಅಂದಾಜು 46 ಕೋಟಿ 21 ಲಕ್ಷ 38 ಸಾವಿರ 461 ರುಪಾಯಿ ಸರ್ಕಾರಕ್ಕೆ ಆದಾಯ ಬಂದಿದೆ.
ಇನ್ನು ಈ ತಿಂಗಳ ಏಪ್ರಿಲ್ 1 ರಿಂದ ಏಪ್ರಿಲ್ 11ರ ವರೆಗೂ ಅಂದರೆ 11 ದಿನಗಳಲ್ಲಿ ರಾಜ್ಯದಲ್ಲಿ ಒಟ್ಟಾರೆ 17.67 ಲಕ್ಷ ಲೀಟರ್ ವಿವಿಧ ಬ್ರ್ಯಾಂಡ್ನ ಬಿಯರ್ ಮಾರಾಟವಾಗಿವೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷವೇ ಇಷ್ಟೊಂದು ಲೀಟರ್ ಬಿಯರ್ ಮಾರಾಟವಾಗಿರುವುದು. 2021ರಲ್ಲಿ ಬೇಸಿಗೆಯ ಅವಧಿಯಲ್ಲಿ 8.83 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. 2022ರಲ್ಲಿ 9.20 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದರೇ, 2023 ರಲ್ಲಿ 13.16 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. 2023ಕ್ಕೆ ಹೋಲಿಸಿದರೆ ಈ ವರ್ಷ ಬರೋಬ್ಬರಿ 4.51 ಲಕ್ಷ ಲೀಟರ್ ಬಿಯರ್ ಹೆಚ್ಚು ಮಾರಾಟ ಆಗಿದೆ.
ಈ ಬೇಸಿಗೆಯಲ್ಲಿ ಹಾಟ್ ಡ್ರಿಂಕ್ಸ್ ಕುಡಿಯಲು ಆಗುವುದಿಲ್ಲ. ಹೀಗಾಗಿ ಕಳೆದ ಮೂರು ತಿಂಗಳಿನಿಂದ ಬಿಯರ್ಗೆ ಶಿಫ್ಟ್ ಆಗಿದ್ದೀನಿ ಪ್ರತಿದಿನ ಎರಡರಿಂದ ಮೂರು ಬಿಯರ್ ಕುಡಿತಿದ್ದೀನಿ ಎಂದು ಮದ್ಯಪ್ರಿಯ ಮಾರಯ್ಯ ಹೇಳಿದರು.
ಒಟ್ಟಿನಲ್ಲಿ ಬೇಸಿಗೆಗೂ ಮುಂಚೆ ಮದ್ಯಪ್ರಿಯರು ದಿನಕ್ಕೋ, ವಾರಕ್ಕೋ ಒಂದೋ ಎರಡೋ ಬಿಯರ್ ಕುಡಿತಿದ್ದರು. ಈ ಬಾರಿಯ ಬೇಸಿಗೆಗೆ ಪ್ರತಿದಿನ ಚಿಲ್ಡ್ಆಗಿ ಬಿಯರ್ ಬೇಕೆ ಬೇಕು ಅಂತ ಮದ್ಯಪ್ರಿಯರು ಹೇಳುತ್ತಿದ್ದಾರೆ.