ಆನೇಕಲ್:- ರಾಜಧಾನಿ ಬೆಂಗಳೂರು ಹೊರ ವಲಯದ ಆನೇಕಲ್ ನಲ್ಲಿ ಪುಡಿ ರೌಡಿ ಶೀಟರ್ ಗಳ ದಾಂಧಲೆ ನಿಂತಿಲ್ಲ. ನಡುರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಜರುಗಿದೆ.
ಎಲೆಕ್ಷನ್ ಮುಗಿದ CM ಬದಲಾವಣೆ ಫಿಕ್ಸ್ – ಸುಳಿವು ಬಿಟ್ಟು ಕೊಟ್ಟ DCM ಡಿಕೆಶಿ!
ಪುರಸಭೆ ಸದಸ್ಯೆಯ ಪತಿಯಾಗಿರುವ ರೌಡಿ ಶೀಟರ್ ಶ್ರೀರಾಮ್ ಮತ್ತಾತನ ಗ್ಯಾಂಗ್ನನಿಂದ ಹಲ್ಲೆ ನಡೆದಿದ್ದು, ಆನೇಕಲ್ ಪಟ್ಟಣದ ಮಂಜುನಾಥ್ ಬಡಾವಣೆಯಲ್ಲಿ ಘಟನೆ ಜರುಗಿದೆ. ವೆಂಕಟೇಶಪ್ಪ(65) ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗಲಾಟೆ ತಡೆಯಲು ಬಂದ ಮಂಜುನಾಥ್ ಎಂಬಾತನ ಮೇಲೆಯೂ ಹಲ್ಲೆ ನಡೆದಿದೆ. ಬೈಕ್ ನಲ್ಲಿ ವೆಂಕಟೇಶ್ ಮನೆಗೆ ತೆರಳುತ್ತಿದ್ದ. ಅದೇ ರಸ್ತೆಯಲ್ಲಿ ಕಾರಿನಲ್ಲಿ ಶ್ರೀರಾಮ್ ಹಾಗೂ ತಂಡ ಬಂದಿದ್ದ. ಏಕಾಏಕಿ ವೆಂಕಟೇಶಪ್ಪನ ಮೇಲೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಲಾಗಿದೆ. ಯಾಕಪ್ಪ ಬೈತಿದ್ದೀಯ ಎಂದು ವೆಂಕಟೇಶಪ್ಪ ಪ್ರಶ್ನೆ ಮಾಡಿದ್ದ. ಅಷ್ಟಕ್ಕೆ ಕಾರಿನಿಂದ ಇಳಿದು ಕಲ್ಲು ತೆಗೆದುಕೊಂಡು ವೆಂಕಟೇಶಪ್ಪನ ಮೇಲೆ ಹಲ್ಲೆ ನಡೆದಿದೆ. ಕುಡಿದ ಮತ್ತಿನಲ್ಲಿ ಶ್ರೀರಾಮ್ ಮತ್ತಾತನ ಪಟಾಲಂನಿಂದ ಹಲ್ಲೆ ನಡೆದಿದೆ. ಗಾಯಾಳು ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಕಳೆದೊಂದು ವಾರದ ಹಿಂದೆ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ರೌಡಿ ಶೀಟರ್ ಶ್ರೀರಾಮ್ ಸೇರ್ಪಡೆ ಆಗಿದ್ದ. ಸಂಸದ ಡಿಕೆ ಸುರೇಶ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಿದ್ದ. ಅಲ್ಲದೇ ಪುಡಿ ರೌಡಿಗಳ ಗ್ಯಾಂಗ್ ಕಟ್ಟಿಕೊಂಡು ಪುಂಡಾಟ ನಡೆಸುತ್ತಿದ್ದ. ಕುಡಿದ ಮತ್ತಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಪುಂಡಾಟ ಮೆರೆದಿದ್ದಾನೆ.
ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ತೆಗೆದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.