ಪಂದ್ಯ ಸೋತರೂ SRH ಬೌಲರ್ಗಳ ಎದೆ ನಡುಗಿಸಿದ ದಿನೇಶ್
ಬ್ಯಾಟಿಂಗ್ಗೆ RCB ಫ್ಯಾನ್ಸ್ ಫಿದಾ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನ್ನಪ್ಪಿತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ತಂಡವು ನಿಗದಿತ 20 ಓರವ್ಗೆ 7 ವಿಕೆಟ್ ಗೆ 262 ರನ್ ಗಳಿಸಿತು. ಈ ಮೂಲಕ 26 ರನ್ ಗಳಿಂದ ಸೋಲನ್ನಪ್ಪಿತು.
ಕುರುಗೋಡು: ನರೇಗಾ ಕೂಲಿ ಕಾರ್ಮಿಕರಿಗೆ ಕಡಿಮೆ ಕೂಲಿ ವಿರೋಧಿಸಿ ಪ್ರತಿಭಟನೆ!
ಆದರೆ ಈ ಪಂದ್ಯದಲ್ಲಿ ಆರ್ಸಿಬಿ ತಮಡದ ಬೌಲರ್ ಗಳು ಹೀನಾಯ ಪ್ರದರ್ಶನ ನೀಡಿದರು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ ಮನ್ಗಳು ಮಾತ್ರ ಹೈದರಾಬಾದ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಅಬ್ಬರಿಸಿದರು.
ಬೆಂಗಳೂರು ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೇಸಿಸ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಈ ವೇಳೆ ಕೊಹ್ಲಿ 20 ಎಸೆತದಲ್ಲಿ 42 ರನ್ ಮತ್ತು ಫಾಫ್ 28 ಎಸೆತದಲ್ಲಿ 62 ರನ್ ಸಿಡಿಸುವ ಮೂಲಕ ಉತ್ತಮ ಆರಂಭ ನೀಡಿದರು. ಈ ಜೋಡಿ ಅಬ್ಬರದ ಬ್ಯಾಟಿಂಗ್ ನೋಡಿದರೆ ಪಂದ್ಯ ಗೆಲ್ಲುವ ಭರವಸೆಯನ್ನು ಮೂಡಿಸಿದ್ದರು
ಆದರೆ ಇವರಿಬ್ಬರ ವಿಕೆಟ್ ಬಳಿಕ ಬಂದ ವಿಲ್ ಜ್ಯಾಕ್ಸ್ ದುರಾದೃಷ್ಟವಶಾತ್ ಔಟ್ ಆದರು. ವಿಲ್ ಜ್ಯಾಕ್ಸ್ 7 ರನ್, ರಜತ್ ಪಾಟಿದಾರ್ 9 ರನ್, ಸೌರವ್ ಚೌಹಾಣ್ ಶೂನ್ಯ, ಮಹಿಪಾಲ್ ಲೊಮ್ರೋರ್ 19 ರನ್ ಗಳಿಸಿ ಪೆವೆಲಿಯನ್ ಸೇರಿದರು. ಕೊನೆಯಲ್ಲಿ ಅನುಜ್ ರಾವತ್ ಸಹ 14 ಎಸೆತದಲ್ಲಿ 25 ರನ್ ಸಿಡಿಸಿದರು.
ಆದರೆ ಹೈದರಾಬಾದ್ ತಂಡದ ಆಟಗಾರರ ಎದೆಯಲ್ಲಿ ಒಮ್ಮೆ ಭಯ ಹುಟ್ಟಿದ ಆಟಗಾರ ಎಂದರೆ ಅದು ಆರ್ಸಿಬಿ ತಂಡದ ಡಿಕೆ ಎಂದೇ ಪ್ರಸಿದ್ಧರಾದ ದಿನೇಶ್ ಕಾರ್ತಿಕ್ ಮಾತ್ರ. ಕೊನೆಯವರೆಗೂ ಎಸ್ಆರ್ಎಚ್ ಬೌಲರ್ ಗಳ ಬೆವರಿಳಿಸಿದರು. ಆದರೆ ದಿನೇಶ್ ಕಾರ್ತಿಕ್ ಮಾತ್ರ ಏಕಾಂಗಿಯಾಗಿ ಹೋರಾಟ ಮಾಡಿದರು.
ಸತತ 2 ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ ಕಾರ್ತಿಕ್ ಅವರಿಗೆ ಇಂದು ಯಾರೊಬ್ಬರೂ ಉತ್ತಮ ಸಾಥ್ ನೀಡಲಿಲ್ಲ. ಇಲ್ಲವಾದ್ದಲ್ಲಿ ಕಾರ್ತಿಕ್ ಪಂದ್ಯದ ಗತಿಯನ್ನೇ ಬದಲಿಸುವ ಸಾಧ್ಯತೆ ಹೆಚ್ಚಿತ್ತು. ಕಾರ್ತಿಕ್ 34 ಎಸೆತದಲ್ಲಿ 7 ಸಿಕ್ಸ್ ಮತ್ತು 5 ಬೌಂಡರಿ ಸಹಿತ 83 ರನ್ ಗಳಿಸಿ ಔಟ್ ಆದರು.
ಈ ಮೂಲಕ ದಿನೇಶ್ ಕಾರ್ತಿಕ್ ಮಾತ್ರ ಹೈದರಾಬಾದ್ ಬೌಲರ್ ಗಳು ಒಮ್ಮೆ ಹೆದರುವಂತೆ ಮಾಡಿದರು. ಈ ಮೂಲಕ ಹೀನಾಯವಾಗಿ ಸೋಲುವ ಪಂದ್ಯವನ್ನು ಕಾರ್ತಿಕ್ ಅವರು ರೋಚಕತೆ ಹಂತಕ್ಕೆ ತಲುಪಿಸಿದರು. ಅಲ್ಲದೇ ಇನ್ನೇನು ಡಿಕೆ ಗೆ ಒಬ್ಬರೂ ಸಾಥ್ ನೀಡಿದರೂ ಸಹ ಪಂದ್ಯದ ಗತಿಯನ್ನೇ ಬದಲಿಸುತ್ತಿದ್ದರು.
ಅಲ್ಲದೇ ಕಾರ್ತಿಕ್ ಅವರ ಈ ಭರ್ಜರಿ ಬ್ಯಾಟಿಂಗ್ ಗೆ ಆರ್ಸಿಬಿ ಅಭಿಮಾನಿಗಳು ಸಲಾಂ ಹೊಡೆದಿದ್ದಾರೆ. ಅವರೊಬ್ಬರಾದರೂ ಸಹ ಸ್ವಲ್ಪ ಸಮಯದವರೆಗೆ ಅಭಿಮಾನಿಗಳನ್ನು ರಂಜಿಸಿದರು. ಅಲ್ಲದೇ ಇದರ ಮೂಲಕ ಕಾರ್ತಿಕ್ ಅವರನ್ನು ಎಲ್ಲರೂ ಹೊಗಳುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾದರು.