ಬೆಂಗಳೂರು: ಐಪಿಎಲ್ 17ನೇ ಸೀಸನ್ನ 30ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅಮೋಘ ಬ್ಯಾಟಿಂಗ್ ಮುಂದುವರಿಸಿದ್ದು, ಆರ್ಸಿಬಿ ಐವರು ಬೌಲರ್ಸ್ ಸತತ ಪ್ರಯತ್ನ ಪಟ್ಟರೂ ಹೆಡ್ ಅಬ್ಬರಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ.
ಕೇವಲ 39 ಎಸೆತದಲ್ಲಿ ಹೆಡ್ ಸೆಂಚೂರಿ ಪೂರೈಸಿ ಸಂಭ್ರಮಿಸಿದರು. ಇಷ್ಟೇ ಅಲ್ಲ ಅತೀ ವೇಗದಲ್ಲಿ ಐಪಿಎಲ್ ಶತಕ ಸಿಡಿಸಿದ ಐಪಿಎಲ್ನ 4ನೇ ಬ್ಯಾಟ್ಸ್ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತ ಆರ್ಸಿಬಿ ಹೈರಣಾಯಿತು. ಈಗಾಗಲೇ 5 ಸೋಲಿನಿಂದ ಕಂಗೆಟ್ಟಿರುವ ಆರ್ಸಿಬಿ ಹೈದರಾಬಾದ್ ಕೂಡ ಶಾಕ್ ನೀಡುವ ಸೂಚನೆ ನೀಡಿದೆ.
ಐಪಿಎಲ್ ಟೂರ್ನಿಯ ಅತೀ ವೇಗದ ಶತಕ ಸಾಧಕರು
ಕ್ರಿಸ್ ಗೇಲ್; 30 ಎಸೆತ vs ಪುಣೆ ವಾರಿಯರ್ಸ್(2013)
ಯೂಸುಫ್ ಪಠಾಣ್; 37 ಎಸೆತ vs ಮುಂಬೈ ಇಂಡಿಯನ್ಸ್(2010)
ಡೇವಿಡ್ ಮಿಲ್ಲರ್; 38 ಎಸೆತ vs ಆರ್ಸಿಬಿ(2013)
ಟ್ರಾವಿಲ್ ಹೆಡ್; 39 ಎಸೆತ vs ಆರ್ಸಿಬಿ(2024)
ಗಿಲ್ಕ್ರಿಸ್ಟ್; 42 vs ಮುಂಬೈ ಇಂಡಿಯನ್ಸ್ (2008)