ಚಿತ್ರದುರ್ಗ: ತಮ್ಮ ಆರೋಗ್ಯದ ಬಗ್ಗೆ ಸ್ವತಃ ಸಚಿವ ಜಮೀರ್ ಅಹ್ಮದ್ ಅವರೇ ಪ್ರತಿಕ್ರಿಯಿಸಿದ್ದಾರೆ. ಆಸ್ಪತ್ರೆಯಿಂದ ಹೊರಬಂದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ತುಮಕೂರಿನಲ್ಲಿ ಮಾಜಿ ಶಾಸಕ ರಫೀಕ್ ಅಹ್ಮದ್ ಅವರ ಮನೆಯಲ್ಲಿ ಬೆಳಗ್ಗಿನ ತಿಂಡಿ ವ್ಯವಶ್ತೆ ಮಾಡಿದ್ದರು. ಈ ವೇಳೆ ವಡೆ ಚೆನ್ನಾಗಿತ್ತು ಅಂತಾ 2 ವಡೆ ಜಾಸ್ತಿ ತಿಂದುಬಿಟ್ಟೆ. ಪರಿಣಾಮ ಗ್ಯಾಸ್ಟ್ರಿಕ್ ಸಮಸ್ಯೆಯಾಗಿ ಎದೆನೋವು ಕಾಣಿಸಿಕೊಂಡಿತು ಎಂದು ಹೇಳಿದರು.
ಕೂಡಲೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡೆ. ಬ್ಲಡ್ ಟೆಸ್ಟ್ ಸಹಿತ ಎಲ್ಲಾ ತರದ ಟೆಸ್ಟ್ ಅನ್ನೂ ವೈದ್ಯರು ಮಾಡಿದರು. ದೇವರ ದಯೆಯಿಂದ ಎಲ್ಲಾ ನಾರ್ಮಲ್ ಇದೆ. ಯಾವುದೇ ಸಮಸ್ಯೆ ಇಲ್ಲ. ಗ್ಯಾಸ್ಟ್ರಿಕ್ ಆಗಿತ್ತು. ಹೀಗಾಗಿ ಸ್ವಲ್ಪ ಎದೆನೋವು ಆಯಿತು ಎಂದು ಜಮೀರ್ ತಿಳಿಸಿದರು.