ಬೆಂಗಳೂರು: 17ನೇ ಆವೃತ್ತಿ ಐಪಿಎಲ್ನ ಅರ್ಧ ಭಾಗ ಮುಕ್ತಾಯಗೊಳ್ಳುವ ಮೊದಲೇ ಪ್ಲೇ-ಆಫ್ ರೇಸ್ನ ಅಳಿವು-ಉಳಿವಿನ ಲೆಕ್ಕಾಚಾರ ಆರಂಭಿಸಿರುವ ಆರ್ಸಿಬಿ ಈಗ ನಿರ್ಣಾಯಕ ಘಟ್ಟದಲ್ಲಿದೆ. ಗೆದ್ದರೆ ಪ್ಲೇ-ಆಫ್, ಸೋತರೆ ಮನೆಗೆ ಎಂಬ ಪರಿಸ್ಥಿತಿಯಲ್ಲಿರುವ ಆರ್ಸಿಬಿ ಸೋಮವಾರ ತವರಿನಲ್ಲಿ ಮಹತ್ವದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.
ಫಾಫ್ ಡು ಪ್ಲೆಸಿ ಸಾರಥ್ಯದ ಆರ್ಸಿಬಿ ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಸೋಲನುಭವಿಸಿದೆ. ಎದ್ದು ಬಿದ್ದು ಒಂದು ಪಂದ್ಯ ಗೆದ್ದಿರುವ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಗಿದೆ. ತಂಡಕ್ಕೆ ಸೋಮವಾರದ್ದು ಸೇರಿ ಇನ್ನು 8 ಪಂದ್ಯ ಬಾಕಿ ಇದೆ.
ನೆಟ್ ರನ್ರೇಟ್ ಲೆಕ್ಕ ಹಾಕಲು ಕ್ಯಾಲ್ಕ್ಯುಲೇಟರ್ ಮೊರೆ ಹೋಗದೆ, ಇತರ ತಂಡಗಳ ಸೋಲಿಗಾಗಿ ಪಾರ್ಥಿಸದೆ ಪ್ಲೇ-ಆಫ್ಗೇರಬೇಕಿದ್ದರೆ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಆರ್ಸಿಬಿ ಗೆಲ್ಲಲೇಬೇಕು. ಸೋತರೆ ಪ್ಲೇ-ಆಫ್ ಹಾದಿ ಭಗ್ನಗೊಳ್ಳುವುದು ಬಹುತೇಕ ಖಚಿತ.
ಒಟ್ಟು ಮುಖಾಮುಖಿ: 22
ಆರ್ಸಿಬಿ: 10
ಹೈದ್ರಾಬಾದ್: 12
ಸಂಭವನೀಯ ಆಟಗಾರರ ಪಟ್ಟಿ
ಆರ್ಸಿಬಿ: ಕೊಹ್ಲಿ, ಡು ಪ್ಲೆಸಿ(ನಾಯಕ), ವಿಲ್ ಜ್ಯಾಕ್ಸ್, ರಜತ್, ಮ್ಯಾಕ್ಸ್ವೆಲ್, ದಿನೇಶ್, ಲೊಮ್ರೊರ್, ಟಾಪ್ಲೀ, ವೈಶಾಖ್, ಸಿರಾಜ್, ಯಶ್ ದಯಾಳ್
ಹೈದ್ರಾಬಾದ್: ಹೆಡ್, ಅಭಿಷೇಕ್, ಏಡನ್, ಕ್ಲಾಸೆನ್, ಸಮದ್, ನಿತೀಶ್, ಶಾಬಾಜ್, ಕಮಿನ್ಸ್(ನಾಯಕ), ಭುವನೇಶ್ವರ್, ಉನಾದ್ಕಟ್, ನಟರಾಜನ್.
ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್ಸ್ಪೋರ್ಟ್ಸ್, ಜಿಯೋ ಸಿನಿಮಾ.