ಮೈಸೂರು: ಬಿಜೆಪಿಯ ಲೋಕಸಭಾ ಅಭ್ಯರ್ಥಿ ಯದುವೀರ್ ಒಡೆಯರ್ (Yaduveer Wadiyar) ವಿಜಯ ಸಂಕಲ್ಪ (Vijay Sankalpa) ಸಮಾವೇಶ ನಡೆದ ಜಾಗದಲ್ಲಿ ಕಸ ತೆಗೆದಿದ್ದಾರೆ. ಭಾನುವಾರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ-ಜೆಡಿಎಸ್ನ (BJP-JDS) ಸುಮಾರು 60 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.
ಯದುವೀರ್ ಒಡೆಯರ್ ಪರವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ (HD Devegowda) ಪ್ರಚಾರ ನಡೆಸಿದ್ದರು. ಇಂದು ಬೆಳಗ್ಗೆ ಮೈದಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಯದುವೀರ್ ಹಾಗೂ ಪತ್ನಿ ತ್ರಿಷಿಕಾ ಅವರು ಮಾಸ್ಕ್ ಧರಿಸಿ ಬಿದ್ದಿದ್ದ ಕಸವನ್ನು (Garbage) ತೆಗೆದಿದ್ದಾರೆ.
ಈ ಮೂಲಕ ನಾನು ಮಹಾರಾಜ ಅಲ್ಲ ಸಾಮಾನ್ಯ ಪ್ರಜೆ ಎಂಬುದನ್ನು ಸಾಬೀತು ಪಡಿಸಿದರು. ಯದುವೀರ್ಗೆ ಸ್ಥಳೀಯರು ಸಾಥ್ ನೀಡಿದರು. ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಬಿಜೆಪಿ, ಜೆಡಿಎಸ್ ನಾಯಕರು ಭಾಗವಹಿಸಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು.