ಬೆಳಗಾವಿ:- ಮಹಿಳೆಯರು ತಿರುಗಿ ಬಿದ್ದ ಮೇಲೆ HDK ಗೆ ಜ್ಞಾನೋದಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ರಾಜ್ಯದ ಮಹಿಳೆಯರೆಲ್ಲ ತಿರುಗಿ ಬಿದ್ದ ಮೇಲೆ ಕುಮಾರಸ್ವಾಮಿಗೆ ಜ್ಞಾನೋದಯವಾದಂತಿದೆ, ಅದರೆ ಅವರು ಎಲ್ಲೋ ಕೂತು ಎದೆಗಾರಿಕೆ ಪ್ರದರ್ಶಿಸುವುದು ಬೇಡ, ಹಿಂದೆ ಹೇಳಿದಂತೆಯೇ ಈಗಲೂ ಎನ್ ಡಿಎ ಪಾರ್ಟ್ನರ್ ಗೆ ಸವಾಲು ಹಾಕುತ್ತೇನೆ, ತಮ್ಮಿಬ್ಬರ ನಡುವೆ ಒಂದು ಚರ್ಚೆ ನಡೆಯಲಿ, ಇದಕ್ಕೂ ಮೊದಲು ಅಸೆಂಬ್ಲಿಯಲ್ಲಿ ಚರ್ಚಿಸುವ ಅಂತ ಹೇಳಿದ್ದೆ, ಆದರೆ ಅವರು ಬರಲಿಲ್ಲ, ಈಗ ಅದೇ ಸವಾಲನ್ನು ನವೀಕರಿಸುತ್ತೇನೆ.
ವಿಧಾನಸಭೆಯಲ್ಲೇ ಚರ್ಚೆ ನಡೆದರೆ ಉತ್ತಮ, ಅಥವಾ ಮಾಧ್ಯಮದವರು ಆಯೋಜಿಸಿದರೂ ಓಕೆ, ತಾನು ಅದಕ್ಕೆ ಸಿದ್ಧ ಎಂದು ಶಿವಕುಮಾರ್ ಹೇಳಿದರು. ಕುಮಾರಸ್ವಾಮಿ ಸಂಸತ್ತಿಗೆ ಹೋಗುವುದು ಸಾಧ್ಯವೇ ಇಲ್ಲ, ಚರ್ಚೆ ನಡೆದರೆ ಅವರೆಂಥ ಸುಳ್ಳುಗಾರ ಮತ್ತು ಮೋಸಗಾರ ಅನ್ನೋದನ್ನು ಬಯಲು ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದರು.