ಬೆಂಗಳೂರು:- ರಾಜಧಾನಿ ಬೆಂಗಳೂರಿನ ಜಲಮಂಡಳಿ ತೋಡಿದ ಗುಂಡಿಗೆ ಬಿದ್ದು ಓರ್ವ ಯುವಕ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.
Rohit Sharma Record: ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಬರೆದ ಹಿಟ್ ಮ್ಯಾನ್!
20 ವರ್ಷದ ಸದ್ದಾಂ ಪಾಷಾ ಸಾವನ್ನಪ್ಪಿದ್ದ ಯುವಕ ಎನ್ನಲಾಗಿದೆ. ಉಮ್ರಾನ್ ಪಾಷಾ ಮತ್ತು ಮುಬಾರಕ್ ಪಾಷಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೆಜೆ ನಗರ ಮೂಲದ ಇವರು ಒಂದೇ ಬೈಕಿನಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಜಲ ಮಂಡಳಿಯವರು ಪೈಪ್ ಹಾಕಲು ಹಳ್ಳ ತೆಗೆದು ಬ್ಯಾರಿಕೇಡ್ ಹಾಕಿದ್ದರು. ಕೊಮ್ಮಘಟ್ಟ ಸರ್ಕಲ್ ಬಳಿ ಬರುವಾಗ ಬ್ಯಾರಿಕೇಡ್ ನಡುವಿನ ಸಣ್ಣ ಜಾಗದಲ್ಲಿ ವೇಗವಾಗಿ ದ್ವಿಚಕ್ರ ಚಲಾಯಿಸಿದ ಪರಿಣಾಮ ಸವಾರ ಸದ್ದಾಂ ಪಾಷಾ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಕೂಡಲೇ ನೆರವಿಗೆ ದಾಖಲಿಸಿದ ಸ್ಥಳೀಯರು ಗಾಯಾಳುಗಳನ್ನು ಗುಂಡಿಯಿಂದ ಮೆಲಕ್ಕೆ ಎತ್ತು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು