ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಆರೋಗ್ಯಕರ ಎನ್ನುವ ಎಳನೀರನ್ನು ಕುಡಿಯುವುದರಿಂದ ದೇಹದಿಂದ ಬೆವರಿನ ರೂಪದಲ್ಲಿ ನಷ್ಟವಾದ ಪೌಷ್ಟಿಕಾಂಶಗಳು ನಮಗೆ ಮರಳಿ ಸಿಗುತ್ತವೆ. ಜೊತೆಗೆ ದೇಹಕ್ಕೆ ನೀರಿನ ಅಂಶ ಸಿಗುವುದರೊಂದಿಗೆ ದೇಹ ತಂಪಾಗುತ್ತದೆ. ಬೇಸಿಗೆಯಲ್ಲಿ ಎಳನೀರು ಕುಡಿಯಲೇಬೇಕು ಎಂದು ಡಾಕ್ಟರ್ ಯಾಕೆ ಹೇಳುತ್ತಾರೆ ನೋಡೋಣ ಬನ್ನಿ.
Geeta Shivraj Kumar: ಬಿಜೆಪಿಗೆ ನನ್ನ ಸ್ಪರ್ಧೆ ಭಯ ಹುಟ್ಟಿಸಿದೆ – ಗೀತಾ ಶಿವರಾಜ್ ಕುಮಾರ್!
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಗುರಿ ಹೊಂದಿರುವವರಿಗೆ ಎಳನೀರು ಸಹಾಯ ಮಾಡುತ್ತದೆ. ಏಕೆಂದರೆ ಎಳನೀರಿನಲ್ಲಿ ಕೊಬ್ಬಿನ ಪ್ರಮಾಣ ತುಂಬಾ ಕಡಿಮೆ ಇದೆ.
ಜೊತೆಗೆ ಕ್ಯಾಲೋರಿಗಳು ಸಹ ಕಡಿಮೆ ಇರಲಿದ್ದು, ಇದೊಂದು ಆರೋಗ್ಯಕರ ಡ್ರಿಂಕ್ ಎನ್ನಬಹುದು. ಹೊಟ್ಟೆ ತುಂಬಿದ ಅನುಭವ ಉಂಟು ಮಾಡುವುದರ ಜೊತೆಗೆ ಹೊಟ್ಟೆ ಹಸಿವನ್ನು ಸಹ ಸುಲಭವಾಗಿ ನಿವಾರಿಸುತ್ತದೆ
ಬೇಸಿಗೆ ಬಿಸಿಲಿನಲ್ಲಿ ಎಂತಹ ಬಲಶಾಲಿಯಾದ ವ್ಯಕ್ತಿ ಕೂಡ ಸುಸ್ತು ಮತ್ತು ಆಯಾಸವನ್ನು ಎದುರು ನೋಡುತ್ತಾನೆ. ಇಂತಹ ಸಂದರ್ಭದಲ್ಲಿ ಎಳನೀರು ಕುಡಿಯುವುದರಿಂದ ವಿಟಮಿನ್ ಬಿ ಕಾಂಪ್ಲೆಕ್ಸ್ ಹೆಚ್ಚಾಗಿ ಸಿಗುತ್ತದೆ.
ಜೊತೆಗೆ ಕಬ್ಬಿಣದ ಅಂಶ ಕೂಡ ಸಿಗುವುದರಿಂದ ಸುಸ್ತು ಮತ್ತು ಆಯಾಸ ದೂರವಾಗುತ್ತದೆ ಜೊತೆಗೆ ಕರುಳಿನ ಪಿಎಚ್ ಬ್ಯಾಲೆನ್ಸ್ ಆಗುತ್ತದೆ. ಇದರಿಂದ ರಾತ್ರಿ ಹೊತ್ತು ನೆಮ್ಮದಿಯ ನಿದ್ರೆ ಕೂಡ ಮಾಡಬಹುದು.
ಎಳನೀರಿನಲ್ಲಿ ನಾರಿನ ಪ್ರಮಾಣ ಹೆಚ್ಚಾಗಿರುವುದರಿಂದ ಅಜೀರ್ಣತೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಅಂದರೆ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಎದೆ ಯುರಿ ಇತ್ಯಾದಿ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಸಾಧ್ಯವಾದಷ್ಟು ತಾಜಾ ಎಳನೀರನ್ನು ಪ್ರತಿದಿನ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು.
ಬಿಪಿ ಜಾಸ್ತಿ ಇರುವವರು ಎಳನೀರನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವಿಸುವುದು ಬಹಳ ಉತ್ತಮ. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಪ್ರಮಾಣ, ಮೆಗ್ನೀಸಿಯಮ್ ಹಾಗೂ ಪೊಟ್ಯಾಶಿಯಮ್ ಹೇರಳವಾಗಿದೆ. ಇದು ನಮ್ಮ ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವುದು ಮಾತ್ರ ವಲ್ಲದೆ ಹೃದಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಸಹ ತಡೆಯುತ್ತದೆ.
ಎಳನೀರು ನಮ್ಮ ದೇಹದಿಂದ ನಷ್ಟವಾದ ನೀರಿನ ಅಂಶವನ್ನು ಮರಳಿ ಕೊಡುತ್ತದೆ. ಇದು ನಮ್ಮ ಜೀರ್ಣನಾಳದ ಆರೋಗ್ಯವನ್ನು ಕಾಪಾಡು ವುದರ ಜೊತೆಗೆ ಅತಿಯಾದ ಬೇಸಿಗೆ ಬಿಸಿಲಿನಲ್ಲಿ ನಮ್ಮ ದೇಹದಿಂದ ನಷ್ಟವಾದ ಎಲೆಕ್ಟ್ರೋಲೈಟ್ ಪ್ರಮಾಣ ಮತ್ತು ನೀರಿನ ಅಂಶವನ್ನು ನಮಗೆ ಮರಳಿ ಕೊಡುತ್ತದೆ.