ಬಳ್ಳಾರಿ:- ದಿಂಗಾಲೇಶ್ವರ ಶ್ರೀ ಚುನಾವಣಾ ಸ್ಪರ್ಧೆ ವಿಚಾರವಾಗಿ ಬಳ್ಳಾರಿಯಲ್ಲಿ ಶಾಸಕ ಅರವಿಂದ್ ಬೆಲ್ಲದ್ ಪ್ರತಿಕ್ರಿಯೆ ನೀಡಿದ್ದಾರೆ.
ದೀನ ದಲಿತರ ಹಾಗೂ ದುರ್ಬಲ ವರ್ಗದವರ ವಿಮೋಚನೆಗಾಗಿ ಜನಿಸಿದ ಮಹಾನಾಯಕ ಅಂಬೇಡ್ಕರ್!
ನಾನು ಅದೇ ಕ್ಷೇತ್ರದಿಂದ ಬಂದಿರುವೆ,. ದಿಂಗಾಲೇಶ್ವರ ಶ್ರೀಗಳಿಂದ ಬಿಜೆಪಿಗೆ ಮತ್ತು ಪ್ರಹ್ಲಾದ್ ಜೋಶಿ ಮೇಲೆ ಯಾವುದೇ ಎಫೆಕ್ಟ್ ಇಲ್ಲ, ಮಲಗಿದ ಹಾಗೇ ನಟನೆ ಮಾಡಿದ್ರೆ ಎಬ್ಬಿಸುವುದು ಕಷ್ಟ, ನಿಜವಾದ ಸಮಸ್ಯೆ ಇದ್ರೆ ಮಾತನಾಡಿ ಬಗೆಹರಿಸಿ ಮನವೊಲಿಸುವ ಕೆಲಸ ಮಾಡಬಹುದು. ಶ್ರೀಗಳ ಸ್ಪರ್ಧೆ ಹಿಂದೆ ಬೇರೆ ಶಕ್ತಿಗಳ ಕೆಲಸ ಇದೆ ಎಂದು ಬೆಲ್ಲದ್ ಹೇಳಿದ್ದಾರೆ.
ಶ್ರೀಗಳ ಮನವೊಲಿಸುವ ಪ್ರಯತ್ನ ಮಾಡಲ್ಲ, ಅವಶ್ಯಕತೆ ಇಲ್ಲ, ಸ್ಪರ್ಧೆ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಅಂತಾ ಅನಿಸುತ್ತೇ ಎಂದರು.
ಈಶ್ವರಪ್ಪ ನಾಮಪತ್ರ ಸಲ್ಲಿಕೆ ವಿಚಾರವಾಗಿ ಮಾತನಾಡಿ, ಬಿಜೆಪಿ ಮತ್ತು ಸಂಘದ ನಿಷ್ಠಾವಂತ ಕಾರ್ಯಕರ್ತ. ಾಮಪತ್ರ ಹಿಂಪಡೆಯುತ್ತಾರೆ ಅಂತಾ ವಿಶ್ವಾಸವಿದೆ,. ನಾಮಪತ್ರ ಹಿಂಪಡೆಯುವ ಭರವಸೆ ನನಗಿದೆ,. ಕಾಂಗ್ರೆಸ್ ಪಾಲ್ಸ್ ಗ್ಯಾರಂಟಿ ವರ್ಕೌಟ್ ಆಗಲ್ಲ. 10 KG ಅಕ್ಕಿ ಕೊಡ್ತಿವಿ ಅಂದ್ರೂ ಕೊಟ್ಟಿಲ್ಲ,. ಮೋದಿನೇ 5 ಕೆಜಿ ಅಕ್ಕಿ ಕೊಟ್ಟಿದ್ದಾರೆ, ಮೋದಿನೇ ಮೂರನೇ ಬಾರಿ ಪ್ರಧಾನಿ ಅಂತಾ ಜನ ನಿರ್ಧಾರ ಮಾಡಿದ್ದಾರೆ,. ದೇಶದಲ್ಲಿ ಮೋದಿ ಗ್ಯಾರಂಟಿ ಮಾತ್ರ ನಿಜವಾದ ಗ್ಯಾರಂಟಿ. ಮೋದಿ ಗ್ಯಾರಂಟಿ ಮುಂದೆ ಯಾವ ಗ್ಯಾರಂಟಿ ವಕ್೯ ಆಗಲ್ಲ ಎಂದರು.
ಬೆಳಗಾವಿಯಲ್ಲಿ ಪಂಚಮಸಾಲಿ ಬಗ್ಗೆ ನಿರಾಣಿ ಹೇಳಿಕೆ ವಿಚಾರವಾಗಿ ಮಾತನಾಡಿ, ನಿರಾಣಿ ನಮ್ಮ ಪಕ್ಷದವರು, ಸಂಜೇಯ್ ಪಾಟೀಲ ಬಗ್ಗೆ ಹೇಳಿಕೆ ಅವಶ್ಯಕತೆ ಇರಲಿಲ್ಲ, ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ ಎಂದರು. ಬಳ್ಳಾರಿಯಲ್ಲಿ ರಾಮುಲು ಜನಪ್ರಿಯತೆ , ರೆಡ್ಡಿ ಶಕ್ತಿಯಿದೆ. ಸೂರ್ಯ ಉದಯಿಸುವುದು ಎಷ್ಟು ಸತ್ಯ, ಬಳ್ಳಾರಿಯಲ್ಲಿ ರಾಮುಲು ಗೆಲವು ಅಷ್ಟೆ ಸತ್ಯ ಎಂದು ಅರವಿಂದ ಬೆಲ್ಲದ್ ಹೇಳಿದ್ದಾರೆ.