ಸತತ ಸೋಲಿನ ಬಳಿಕ ಆರ್ಸಿಬಿ ಇದೀಗ ತವರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ SRH ತಂಡ ಎದುರಿಸಲಿದೆ.
ಬ್ಯಾಟಿಂಗ್ ಬಲಿಷ್ಠ ಸನ್ರೈಸರ್ಸ್ ಹೈದರಾಬಾದ್ ಎದುರು ಪೈಪೋಟಿ ನಡೆಸಲಿದ್ದು, ಸೋಲಿನ ಕೊಂಡಿ ಕಳಚುವ ಪ್ರಯತ್ನ ಮಾಡಲಿದೆ. ಮೊದಲ 6 ಪಂದ್ಯಗಳಲ್ಲಿ ಕೇವಲ ಒಂದು ಜಯ ದಕ್ಕಿಸಿಕೊಳ್ಳಲು ಮಾತ್ರ ಯಶಸ್ವಿಯಾಗಿರುವ ಆರ್ಸಿಬಿ ಇದೀಗ ತವರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರವಾಸಿ ಸನ್ರೈಸರ್ಸ್ ಹೈದರಾಬಾದ್ ಎದುರು ಸೋಮವಾರ (ಏ.15) ಪೈಪೋಟಿ ನಡೆಸಲಿದೆ.
ಪ್ರತಿಷ್ಟಿತ ವಿಲ್ಲಾದಲ್ಲಿ ಕೆಲಸ ಮಾಡ್ತಿದ್ದ ಯುವಕ ಸ್ವಿಮ್ಮಿಂಗ್ ಫೂಲ್ನಲ್ಲಿ ಶವವಾಗಿ ಪತ್ತೆ!
ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಆರ್ಸಿಬಿ 196/8 ರನ್ ಗಳಿಸಿದರು ಕೂಡ ದುರ್ಬಲ ಬೌಲಿಂಗ್ ಕಾರಣ 15.1 ಓವರ್ಗಳಲ್ಲೇ ವ198 ರನ್ ಹೊಡೆಸಿಕೊಂಡು ಹೀನಾಯ ಸೋಲಿನ ಆಘಾತಕ್ಕೊಳಗಾಯಿತು. ಆರ್ಸಿಬಿ ತಂಡದ ಬೌಲಿಂಗ್ ವಿಭಾಗದಲ್ಲಿ ವಿಕೆಟ್ ಟೇಕರ್ಗಳಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಟೂರ್ನಿಯುದ್ದಕ್ಕೂ ಆರ್ಸಿಬಿ ತಂಡದ ಬ್ಯಾಟರ್ಸ್ ಅಬ್ಬರಿಸಿದ್ದಾರೆ. ವಿರಾಟ್ ಕೊಹ್ಲಿ 6 ಪಂದ್ಯಗಳಿಂದ 319 ರನ್ ಬಾರಿಸಿ ಆರೆಂಜ್ ಕ್ಯಾಪ್ ರೇಸ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ, ಬೌಲಿಂಗ್ ವಿಭಾಗದ ಸ್ಥಿತಿ ದಯನೀಯವಾಗಿದೆ.
ಸತತ ನಾಲ್ಕು ಸೋಲಿನಿಂದ ಕಂಗಾಲಾಗಿರುವ ಆರ್ಸಿಬಿ ತಂಡ ಇದೀಗ ಸನ್ರೈಸರ್ಸ್ ಪಂದ್ಯಕ್ಕೆ ತನ್ನ ಆಡುವ 11ರ ಬಳಗದಲ್ಲಿ ಬದಲಾವಣೆ ತಂದುಕೊಳ್ಳುವ ಸಾಧ್ಯತೆ ಇದೆ. ಪ್ರಮುಖವಾಗಿ ತಂಡ ತನ್ನ ಬೌಲಿಂಗ್ ವಿಭಾಗದ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಕಡೆಗೆ ಒತ್ತು ಕೊಡಬಹುದು. ಬೆಂಚ್ ಕಾಯುತ್ತಿರುವ ಕಿವೀಸ್ ವೇಗಿ ಲಾಕಿ ಫರ್ಗ್ಯೂಸನ್ಗೆ ಈಗಲಾದರೂ ಮಣೆ ಹಾಕಬಹುದು. ಲಯ ಕಳೆದುಕೊಂಡಿರುವ ಮೊಹಮ್ಮದ್ ಸಿರಾಜ್ ಅವರನ್ನು ಹೊರಗಿಡಬಹುದು.
ಎಸ್ಆರ್ಎಚ್ ಕದನಕ್ಕೆ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11
01. ವಿರಾಟ್ ಕೊಹ್ಲಿ (ಓಪನರ್)
02. ಫಾಫ್ ಡು ಪ್ಲೆಸಿಸ್ (ನಾಯಕ/ ಓಪನರ್)
03. ವಿಲ್ ಜಾಕ್ಸ್ (ಆಲ್ರೌಂಡರ್)
04. ರಜತ್ ಪಾಟಿದಾರ್ (ಬ್ಯಾಟರ್)
05. ಕ್ಯಾಮೆರಾನ್ ಗ್ರೀನ್ (ಆಲ್ರೌಂಡರ್)
06. ದಿನೇಶ್ ಕಾರ್ತಿಕ್ (ವಿಕೆಟ್ಕೀಪರ್/ ಬ್ಯಾಟ್ಸ್ಮನ್)
07. ಟಾಮ್ ಕರ್ರನ್ (ಆಲ್ರೌಂಡರ್)
08. ಕರಣ್ ಶರ್ಮಾ (ಲೆಗ್ ಸ್ಪಿನ್ನರ್)
09. ಲಾಕಿ ಫರ್ಗ್ಯೂಸನ್ (ಫಾಸ್ಟ್ ಬೌಲರ್)
10. ವೈಶಾಖ್ ವಿಜಯ್ ಕುಮಾರ್ (ಫಾಸ್ಟ್ ಬೌಲರ್)
11. ಆಕಾಶ್ ದೀಪ್ (ಫಾಸ್ಟ್ ಬೌಲರ್)