ಬೆಂಗಳೂರು ಗ್ರಾಮಾಂತರ:- ಪ್ರತಿಷ್ಟಿತ ವಿಲ್ಲಾದಲ್ಲಿ ಕೆಲಸ ಮಾಡ್ತಿದ್ದ ಯುವಕ ಸ್ವಿಮ್ಮಿಂಗ್ ಫೂಲ್ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದಂಡುದಾಸ ಕೊಡಿಗೇಹಳ್ಳಿಯಲ್ಲಿ ಜರುಗಿದೆ.
ಶೋಭರಾಜ್ ಎನ್ನುವ ಯುವಕ ಕಳೆದ ಎರಡು ಮೂರು ವರ್ಷಗಳಿಂದ ಇದೇ ವಿಲ್ಲಾದಲ್ಲಿ ಕೆಲಸ ಮಾಡುತ್ತಿದ್ದ. ಅದರಂತೆ ಏ.12 ರ ಸಂಜೆ ಸಹ ವಿಲ್ಲಾದಲ್ಲಿ ಕೆಲಸ ಮಾಡಲು ಬಂದಿದ್ದ ಶೋಭರಾಜ್, ಸಂಜೆ ಸ್ವಿಮ್ಮಿಂಗ್ ಫೂಲ್ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ
ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಮೃತ ಶೋಭರಾಜ್ಗೆ ಈಜಲು ಸಹ ಬರುತ್ತಿತ್ತು. ಹೀಗಿರುವಾಗ ಶೋಭರಾಜ್ ಸ್ವಿಮ್ಮಿಂಗ್ ಪೂಲ್ನಲ್ಲಿ ಅನುಮಾನಾಸ್ವದ ರೀತಿಯಲ್ಲಿ ಪತ್ತೆಯಾಗಿದ್ದು, ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ. ಸ್ವಿಮ್ಮಿಂಗ್ ಪೂಲ್ನಲ್ಲಿ ಸಂಜೆ 4 ಗಂಟೆ ಸುಮಾರಿಗೆ ಶೋಭರಾಜ್ ಶವವಾಗಿ ಪತ್ತೆಯಾಗಿದ್ದು, ರಾತ್ರಿ 8 ಗಂಟೆಯವರೆಗೂ ವಿಲ್ಲಾಗಳ ಮ್ಯಾನೇಜ್ಮೆಂಟ್ ಆಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಬಂದು ನೋಡಲಿಲ್ವಂತೆ. ಅಲ್ಲೆ ಈಜು ಬರ್ತಿದ್ದ ಶೋಭರಾಜು ಸ್ವೀಮ್ಮಿಂಗ್ ಪೂಲ್ಗೆ ಬಿದ್ದು ಹೇಗೆ ಸತ್ತ ಎಂದು ಸಂಬಂಧಿಕರು ಪ್ರಶ್ನೆ ಮಾಡುತ್ತಿದ್ದಾರೆ.