ರಾಮನಗರ: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಫುಲ್ ಅಲರ್ಟ್ ಆಗಿರುವ ಚುನಾವಣಾಧಿ ಕಾರಿಗಳು ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಕೋಟಿ ಕೋಟಿ ರೂ. ಬೆಲೆ ಬಾಳುವ ಚಿನ್ನ, ವಜ್ರ ಆಭರಣವನ್ನು ಜಪ್ತಿ ಮಾಡಿದ್ದಾರೆ. ರಾಮನಗರ, ದಾವಣಗೆರೆ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ,
ಕಚ್ಚಾ ಚಿನ್ನ ಹಾಗೂ ವಜ್ರಗಳನ್ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ರಾಮನಗರದ ಹೆಜ್ವಾಲ ಚೆಕ್ಪೋಸ್ಟ್ (Ramanagara Hejwala Checkpost) ಬಳಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ, 30 ಕೆಜಿಗೂ ಹೆಚ್ಚು ಚಿನ್ನ, 10 ಕೆಜಿಯಷ್ಟು ಬೆಳ್ಳಿಯನ್ನ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈ ಖಾಯಿಲೆ ಇರುವವರು ಪೇರಳೆ ಹಣ್ಣು ತಿನ್ನಲೇಬೇಡಿ..! ಅಪಾಯ ಕಟ್ಟಿಟ್ಟಬುತ್ತಿ
ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಮಲಬಾರ್ ಗೋಲ್ಡ್ & ಡೈಮಂಡ್ ಕಂಪನಿಗೆ ಸೇರಿದ್ದು ಎನ್ನಲಾದ ವಾಹನದಲ್ಲಿ ಚಿನ್ನ, ಬೆಳ್ಳಿ ಪತ್ತೆಯಾಗಿದೆ. ಸೂಕ್ತ ದಾಖಲೆ ಇಲ್ಲದಿದ್ದರಿಂದ ಅಧಿಕಾರಿಗಳು ಚಿನ್ನವನ್ನ ಜಪ್ತಿ ಮಾಡಿದ್ದಾರೆ. ಸೂಕ್ತ ದಾಖಲೆ ತೋರಿಸಿ, ಹಿಂಪಡೆದುಕೊಳ್ಳುವಂತೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.