ಮಜ್ಜಿಗೆ ಎಲ್ಲಾ ಕಾಲಕ್ಕೂ ಆರೋಗ್ಯಕರ. ಮಜ್ಜಿಗೆಗೆ ಮೆಣಸು, ಕೊತ್ತಂಬರಿ ಪುಡಿ, ಕಾಲಾ ನಮಕ್, ಒಣಗಿದ ಶುಂಠಿ ಮಸಾಲೆ ಪದಾರ್ಥ ಸೇರಿಸಿ ಕುಡಿದರೆ ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆಯಬಹುದು. ಆಯುರ್ವೇದದಲ್ಲಿ ಕರುಳಿನ ಸಮಸ್ಯೆಗಳಿಗೆ ಮಜ್ಜಿಗೆ ಸೇವನೆಯು ಸಾವಿರಾರು ವರ್ಷಗಳಿಂದ ಸಾಂಪ್ರದಾಯಿಕ ಪರಿಹಾರವಾಗಿದೆ. ಮಜ್ಜಿಗೆ ಮನೆಯಲ್ಲಿ ತಯಾರಿಸಿದ ಪಾನೀಯ.
ಗುಡ್ನ್ಯೂಸ್: ಮುಟ್ಟಿನ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ರಜೆ ಘೋಷಣೆ! – ಸುದ್ದಿ ಪೂರ್ತಿ ಓದಿ!
ಇದು ಬಲವಾದ ಮೂಳೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಮಜ್ಜಿಗೆಯು ಬಾಯಿಯ ಆರೋಗ್ಯ ಸುಧಾರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟ ಕಡಿಮೆ ಮಾಡುತ್ತದೆ. ಇದು ವಿವಿಧ ಆರೋಗ್ಯ ಪ್ರಯೋಜನ ನೀಡುತ್ತದೆ. ಹಾಗೆಯೇ ಅತಿಯಾದ ಮಜ್ಜಿಗೆ ಸೇವನೆಯು ಆರೋಗ್ಯಕ್ಕೆ ಅಡ್ಡ ಪರಿಣಾಮ ಉಂಟು ಮಾಡುತ್ತದೆ.
ಮಜ್ಜಿಗೆಯ ಸೇವನೆಯು ಲ್ಯಾಕ್ಟೋಸ್ ಅಸಹಿಷ್ಣುತೆಗೆ ಕಾರಣವಾಗುತ್ತದೆ. ಇದು ಮಜ್ಜಿಗೆ, ಹಾಲು ಮತ್ತು ಡೈರಿ ಉತ್ಪನ್ನಗಳಲ್ಲಿ ಕಂಡು ಬರುವ ಲ್ಯಾಕ್ಟೋಸ್ ಹೊಂದಿದೆ. ಲ್ಯಾಕ್ಟೋಸ್ ಅಸಹಿಷ್ಣುತೆಯಿರುವ ಜನರು ಮಜ್ಜಿಗೆ ಕುಡಿದರೆ ಇದು ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್, ಅತಿಸಾರ, ಜೀರ್ಣಕಾರಿ ಅಸ್ವಸ್ಥತೆ ಉಂಟು ಮಾಡುತ್ತದೆ.
ಅಲರ್ಜಿ ಉಂಟು ಮಾಡುತ್ತದೆ. ಮಜ್ಜಿಗೆಯು ಚರ್ಮದ ದದ್ದು, ತುರಿಕೆ, ಉಸಿರಾಟ ಸಮಸ್ಯೆ ಉಂಟು ಮಾಡುತ್ತದೆ. ಇದು ಕ್ಯಾಲೋರಿ ಹೆಚ್ಚಿಸುವ ಸಾಧ್ಯತೆಯೂ ಇದೆ. ಹೆಚ್ಚು ಮಜ್ಜಿಗೆ ಸೇವನೆಯು ಅದರಲ್ಲಿ ಸೇರಿಸಿದ ಸಕ್ಕರೆ ಹಾಗೂ ಇತರೆ ಅಂಶಗಳಿಂದಾಗಿ ಕ್ಯಾಲೋರಿ ಹೆಚ್ಚಿಸುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು.
ಸೋಡಿಯಂ ಸೇವನೆಗೆ ಕಾರಣವಾಗುತ್ತದೆ. ನೀವು ಮಾರುಕಟ್ಟೆಯಲ್ಲಿ ದೊರೆಯುವ ಮಜ್ಜಿಗೆ ಸೇವಿಸಿದರೆ ಅವುಗಳು ಅಧಿಕವಾದ ಉಪ್ಪನ್ನು ಒಳಗೊಂಡಿರುತ್ತವೆ. ಇದು ಅಧಿಕ ರಕ್ತದೊತ್ತಡ ಅಥವಾ ಹೃದಯ ಸಮಸ್ಯೆ ಆರೋಗ್ಯ ಪರಿಸ್ಥಿತಿಗೆ ಕಾರಣವಾಗುತ್ತದೆ. ಹಾಗಾಗಿ ಸೋಡಿಯಂ ಮಟ್ಟ ನಿಯಂತ್ರಿಸಲು ಮಸಾಲಾ ಮಜ್ಜಿಗೆ ಕುಡಿಯುವುದನ್ನು ತಪ್ಪಿಸಿ.
ಮಸಾಲೆ, ಗಿಡಮೂಲಿಕೆ ಸೇರಿಸಿದ ಮಜ್ಜಿಗೆಯು ಜಠರಗರುಳಿನ ಅಸ್ವಸ್ಥತೆ ಅಥವಾ ಇತರ ರೋಗಲಕ್ಷಣ ಉಂಟು ಮಾಡಬಹುದು. ಮಿತಿಮೀರಿದ ಮಜ್ಜಿಗೆ ಸೇವನೆಯು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹಾಗಾಗಿ ಮನೆಯಲ್ಲೇ ಮಾಡಿದ ಮಜ್ಜಿಗೆಯನ್ನು ಮಿತವಾಗಿ ಸೇವಿಸಿ