ಚಂಡೀಗಢ:- ಕಾಲೇಜು ವಿದ್ಯಾರ್ಥಿನಿಯರು ಮುಟ್ಟಿನ ಸಮಯದಲ್ಲಿ ಕಾಲೇಜಿಗೆ ಹೋಗುವುದಕ್ಕೆ ಕಷ್ಟಕರವಾಗುತ್ತದೆ. ಹೀಗಾಗಿ ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯದ ಮಹಿಳಾ ವಿದ್ಯಾರ್ಥಿನಿಯರು ಮುಟ್ಟಿನ ಸಮಯದ ವೇಳೆ ರಜೆಯನ್ನು ಪಡೆಯಬಹುದಾಗಿದೆ ಎಂದು ಘೋಷಿಸಿದೆ. ಹೀಗೆ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯನ್ನು ನೀಡುವ ಮೂಲಕ ದೇಶದ ಮೊದಲ ವಿಶ್ವವಿದ್ಯಾಲಯವಾಗಿ ಹೊರ ಹೊಮ್ಮಿದೆ.
IPL 2024: ಕಿಂಗ್ ಕೊಹ್ಲಿ ನಡುಗೋದು ಆ ಒಂದು ವಿಚಾರಕ್ಕಂತೆ! – ಬಹಿರಂಗವಾಗಿ ಹೇಳಿದ ವಿರಾಟ್!
ಈ ನೀತಿಯನ್ನು 2024-25ರ ಶೈಕ್ಷಣಿಕ ಅಧಿವೇಶನದ ಮುಂಬರುವ ಸೆಮಿಸ್ಟರ್ಗಳಿಂದ ಜಾರಿಗೊಳಿಸಲಾಗುವುದು ಎಂದು ಪಂಜಾಬ್ ವಿಶ್ವವಿದ್ಯಾಲಯದ ಉಪಕುಲಪತಿಗಳು ಮಾಹಿತಿ ನೀಡಿದ್ದಾರೆ.
ರಜೆ ಪಡೆಯಲು ವಿದ್ಯಾರ್ಥಿಗಳು ಇಲಾಖೆ ಕಚೇರಿಯಲ್ಲಿ ನಮೂನೆಯನ್ನು ಭರ್ತಿ ಮಾಡಿ ಅಧ್ಯಕ್ಷರು ಅಥವಾ ನಿರ್ದೇಶಕರಿಂದ ಅನುಮೋದನೆ ಪಡೆಯಬೇಕು. ವಿದ್ಯಾರ್ಥಿಯ ಸ್ವಯಂ ಪ್ರಮಾಣೀಕರಣದ ಆಧಾರದ ಮೇಲೆ ರಜೆಯನ್ನು ನೀಡಲಾಗುವುದು. ಆದರೆ ಮಧ್ಯ-ಸೆಮಿಸ್ಟರ್ ಮತ್ತು ಅಂತಿಮ-ಸೆಮಿಸ್ಟರ್ ಪರೀಕ್ಷೆಗಳು, ಆಂತರಿಕ ಅಥವಾ ಬಾಹ್ಯ ಅಥವಾ ಪ್ರಾಯೋಗಿಕ ಪರೀಕ್ಷೆಗಳು ಸೇರಿದಂತೆ ಯಾವುದೇ ಪರೀಕ್ಷೆಗಳ ಸಮಸ್ಯೆದಲ್ಲಿ ಈ ರಜೆ ನೀಡಲಾಗುವುದಿಲ್ಲ.
ವಿದ್ಯಾರ್ಥಿಗಳು ತಿಂಗಳಿಗೆ ಒಂದು ದಿನದ ರಜೆಗೆ ಮಾತ್ರ ಅರ್ಜಿ ಸಲ್ಲಿಸಬಹುದು ಮತ್ತು ಅದನ್ನು ಎರಡು ಅಥವಾ ಅದಕ್ಕಿಂತ ಹೆಚ್ಚು ದಿನಗಳವರೆಗೆ ತೆಗೆದುಕೊಂಡರೆ ಪರಿಗಣಿಸಲಾಗುವುದಿಲ್ಲ, ಇದಲ್ಲದೇ ಯಾವುದೇ ಪರೀಕ್ಷೆಯ ಸಮಯದಲ್ಲಿ ಈ ರಜೆಯನ್ನು ನೀಡಲಾಗುವುದಿಲ್ಲ ಎಂದು ಉಲ್ಲೇಖಿಸಲಾಗಿದೆ ಎಂದು ಹೇಳಿದೆ.