ಹಾವೇರಿ:- ಜಿಲ್ಲೆಯ ಹಲವೆಡೆಗಳಲ್ಲಿ ಬಿರುಗಾಳಿ ಸಮೇತ ಧಾರಕಾರವಾಗಿ ಮಳೆಯಾಗಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣ ಮತ್ತು ರಟ್ಟಿಹಳ್ಳಿಯ ಸುತ್ತಮೂತ್ತಲಿನ ಭಾಗದಲ್ಲಿ ಗುಡುಗು ಸಿಡಲಿನೊಂದಿಗೆ ಮಳೆ ಧಾರಕಾರವಾಗಿ ಮಳೆಯಾಗಿದೆ.
ಹಸೆಮಣೆ ಏರಲು ‘ಟಗರು ಪುಟ್ಟಿ’ ರೆಡಿ…ಮಾನ್ವಿತಾ ಕೈ ಹಿಡಿಯುತ್ತಿರುವ ವರ ಯಾರು?
ಬಿರುಗಾಳಿ ಸಮೇತ ಮಳೆಗೆ ಮನೆಯ ಮೇಲ್ಚಾವಣೆಗೆ ಹಾಕಿದ್ದ ತಗಡಿನ ಶೀಟ್ ಗಳು ಗಾಳಿಗೆ ಹಾರಿ ಹೋಗಿವೆ. ಇನ್ನೂ ಹಿರೆಕೆರೂರು ಪಟ್ಟಣದ ಕೆಲವು ಮನೆಗಳ ಮೇಲ್ಚಾವಣೆಗೆ ಹಾಕಿದ್ದ ತಗಡಿನ ಶೀಟ್ ಗಳು ಹಾರಿ ಹೋಗಿವೆ. ಕೆಲವು ಕಡೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.
ಮೇಲ್ವಾವಣಿಗೆ ಹಾಕಿದ್ದ ತಗಡಿನ ಶಿಟ್ ಹಾರಿ ಹೋಗುವ ದೃಶ್ಯವನ್ನ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಯಾಗಿದೆ. ಸತತ ಎರಡು ಗಂಟೆಗಳ ಧಾರಕಾರವಾದ ಮಳೆಗೆ ಹಿರೇಕೆರೂರಿನ ಜನರು ಸಂತಸಗೊಂಡಿದ್ದಾರೆ…