ಕೆಂಡಸಂಪಿಗೆ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಹೆಜ್ಜೆ ಇಟ್ಟು ಸಕ್ಸಸ್ ಫುಲ್ ನಟಿಯಾಗಿ ಹೊರಹೊಮ್ಮಿರುವವರು ಮಾನ್ವಿತಾ ಕಾಮತ್.. ಆರ್ ಜೆಯಾಗಿದ್ದ ಮಾನ್ವಿತಾ ಸುಕ್ಕ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಬಲಗಾಲಿಟ್ಟರು. ಬಳಿಕ ಶಿವಣ್ಣನ ಟಗರು ಸಿನಿಮಾದಲ್ಲಿ ಬಣ್ಣ ಹಚ್ಚಿ ಟಗರು ಪುಟ್ಟಿಯಾಗಿ ಕರುನಾಡ ಪ್ರೇಕ್ಷಕರ ಮನ ಗೆದ್ದ ಈ ಸುಂದರಿ ಈಗ ಹಸೆಮಣೆ ಏರಲು ರೆಡಿಯಾಗಿದ್ದಾರೆ.
Breaking News: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್ -ಶಂಕಿತರನ್ನ ಬೆಂಗಳೂರಿಗೆ ಕರೆತಂದ NIA!
ಮಾನ್ವಿತಾ ಕಾಮತ್ ಗೆ ಕಂಕಣ ಭಾಗ್ಯ ಕೂಡಿಬಂದಿದೆ. ಮೈಸೂರು ಮೂಲದ ಸಂಗೀತ ನಿರ್ದೇಶಕ ಅರುಣ್ ಕುಮಾರ್ ಅವರೊಂದಿಗೆ ಕೆಂಡಸಂಪಿಗೆ ಕುವರಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೇ 1 ರಂದು ಮಾನ್ವಿತಾ ಅರುಣ್ ಕುಮಾರ್ ವಿವಾಹೋತ್ಸವ ನಡೆಯಲಿದೆ.
ಮಾನ್ವಿತಾ ಕಾಮತ್ ಹಾಗೂ ಅರುಣ್ ಕುಮಾರ್ ಕೊಂಕಣಿ ಸಂಪ್ರದಾಯದಂತೆ ಮೇ1 ಕ್ಕೆ ಹೊಸ ಬಾಳಿಗೆ ಹೆಜ್ಜೆ ಇಡಲಿದ್ದಾರೆ. ಅದಕ್ಕೂ ಮುನ್ನ ಏಪ್ರಿಲ್ 29ಕ್ಕೆ ಮೆಹಂದಿ ಕಾರ್ಯಕ್ರಮ, ಏಪ್ರಿಲ್ 30 ಅರಿಶಿನ ಶಾಸ್ತ್ರ ಜರುಗಿದರೆ, ಏಪ್ರಿಲ್ 30ರಂದು ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಚಿಕ್ಕಮಗಳೂರಿನ ಕಳಸದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆ ನಡೆಯಲಿದೆ.