ಕೋಲ್ಕತ್ತಾ:- ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಕೇಸ್ ಗೋ ಸಂಬಧಪಟ್ಟಂತೆ ಬಿಜೆಪಿ ವಿರುದ್ದ ಮಮತಾ ಬ್ಯಾನರ್ಜಿ ಕೆಂಡಕಾರಿದ್ದಾರೆ.
ಪ್ರಕರಣದಲ್ಲಿ ಎನ್ಐಎ ತಂಡ ಕೋಲ್ಕತಾದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಈ ವಿಚಾರ ಈಗ ಬಿಜೆಪಿ ಮತ್ತು ಟಿಎಂಸಿ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳ ಉಗ್ರಗಾಮಿಗಳ ಅಡಗುದಾಣವಾಗಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಈ ಹೇಳಿಕೆಗೆ ಪಶ್ಚಿಮ ಬಂಗಾಳ ಪೊಲೀಸ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಬ್ಬರು ಶಂಕಿತ ಉಗ್ರರಾದ ಮುಸ್ಸಾವಿರ್ ಹುಸೇನ್ ಶಾಝಿಬ್ ಹಾಗೂ ಅವರ ಸಹಚರ ಅಬ್ದುಲ್ ಮದೀನ್ ಅಹ್ಮದ್ ತಾಹಾ ಅವರನ್ನು ಕೋಲ್ಕತಾದಲ್ಲಿ ಬಂಧಿಸಲು ಎನ್ಐಎಗೆ ಕೋಲ್ಕತಾ ಪೊಲೀಸ್ ನೆರವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ RCB ಗೆ ಮೋಸ! – ರೆಫರಿ ಮತ್ತು ಅಂಪೈರ್ಗಳ ವಿರುದ್ಧ ಫ್ಯಾನ್ಸ್ ಕಿಡಿ!
ಆರೋಪಿಗಳು ಇಲ್ಲಿಯವರಲ್ಲ, ಕರ್ನಾಟಕದವರು. ಬಂಗಾಳಕ್ಕೆ ಬಂದು ಎರಡು ಗಂಟೆಗಳಿಂದ ಅಡಿಗಿಕೊಂಡಿದ್ದರು. ಈ ಎರಡು ಗಂಟೆಯಲ್ಲಿ ನಮ್ಮ ಪೊಲೀಸರು ಇವರನ್ನು ಹಿಡಿದುಹಾಕಿದ್ದಾರೆ. ಈ ಮನುಷ್ಯರು ಬಂಗಾಳ ಸುರಕ್ಷಿತ ಅಲ್ಲ ಎನ್ನುತ್ತಿದ್ದಾರೆ,’ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ