ಮುಂಬೈ ವಿರುದ್ಧದ ಪಂದ್ಯದಲ್ಲಿ ರೆಫಿರಿ ಮತ್ತು ಅಂಪೈರ್ಗಳು ಆರ್ಸಿಬಿಗೆ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.
ಟಾಸ್ ಸೇರಿದಂತೆ ಎಲ್ಲ ಕಡೆಯೂ ಮುಂಬಯಿ ತಂಡಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆಪಾದನೆಗಳು ಕೇಳಿ ಬಂದಿವೆ. ದೊಡ್ಡ ಟೂರ್ನಿಯಲ್ಲಿ ಈ ರೀತಿ ಆಗುತ್ತಿರುವ ಬಗ್ಗೆ ಆರ್ಸಿಬಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇಂಥ ಕೃತ್ಯಗಳನ್ನು ಬಿಸಿಸಿಐ ತಡೆಬೇಕು ಎಂದು ವಿಡಿಯೊ ಸಮೇತ ಒತ್ತಾಯ ಮಾಡಿದ್ದಾರೆ.
Karnataka Weather: ರಾಜ್ಯದ ಹಲವೆಡೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ !
ಟಾಸ್ಗಾಗಿ ನಾಣ್ಯ ಎಸೆದು ಅದು ಬಿದ್ದಲ್ಲಿಂದ ರೆಫರಿ ಅದನ್ನು ಎತ್ತಿಕೊಳ್ಳುವಾಗ ಮುಂಬಯಿ ತಂಡದ ನಾಯಕ ಹಾರ್ದಿಕ್ ಪಾಂಡ್ಯನ ಕರೆಗೆ ಪೂರಕವಾಗುವಂತೆ ತಿರುಗಿಸುತ್ತಿರುವುದು ಕಂಡುಬಂದಿದೆ. ಆರ್ಸಿಬಿ ನಾಯಕ ಪ್ಲೆಸಿಸ್ ತಲೆ ಕರೆ ಕೊಟ್ಟಿದದರು. ಟೈಲ್ ಬಿದ್ದಿದ್ದರೂ ರೆಫರಿ ಎತ್ತಿಕೊಳ್ಳುವಾಗ ಹೆಡ್ ಕಡೆಗೆ ತಿರುಗಿಸಿದ್ದಾರೆ ಎನ್ನಲಾಗಿದೆ. ಈ ಕೃತ್ಯವು ಮುಂಬೈಗೆ ಅನುಕೂಲಕರ ಟಾಸ್ ಗೆಲುವು ನೀಡಿದೆ. ನಾಯಕ ಹಾರ್ದಿಕ್ ಪಾಂಡ್ಯ ಆರ್ಸಿಬಿ ವಿರುದ್ಧ ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ವಾಖೆಂಡೆಯಲ್ಲಿ ಟಾಸ್ ಗೆಲುವಿನ ನಿರ್ಣಾಯಕ ಅಂಶವಾಗಿದೆ. ಮೊದಲ ಬೌಲಿಂಗ್ ಮಾಡಿದ ತಂಡಕ್ಕೆ ವಿಜಯದ ಅವಕಾಶ ಹೆಚ್ಚು. ರಾತ್ರಿ ಪರಿಣಾಮಕಾರಿ ಬೌಲಿಂಗ್ ಮಾಡಲು ಇಬ್ಬನಿ ಪರಿಣಾಮ ಅಡ್ಡಿ ಮಾಡುತ್ತದೆ. ಮೋಸ ಮಾಡಲಾಗಿದೆ ಎಂಬ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಐಪಿಎಲ್ ಪಂದ್ಯಗಳು ಪೂರ್ವನಿರ್ಧರಿತ ಮತ್ತು ದೊಡ್ಡ ತಂಡಗಳಿಗೆ ಅನುಕೂಲಕರ ಎಂಬ ವದಂತಿಗಳನ್ನು ಮತ್ತೊಮ್ಮೆ ಹುಟ್ಟುಹಾಕಿದೆ.
ಇದೇ ರೀತಿ ಬೌಂಡರಿ ನೀಡುವಾಗ ಮತ್ತು ನೋ ಬಾಲ್ ಹಾಗೂ ವೈಡ್ಗಳನ್ನು ನೀಡುವ ವಿಚಾರದಲ್ಲೂ ಅಂಪೈರ್ಗಳು ತಾರತಮ್ಯ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಆರ್ಸಿಬಿಗೆ ಸಿಗಬೇಕಾದ ರನ್ ಕೊಟ್ಟಿಲ್ಲ. ವೈಡ್ ಕೊಟ್ಟಿಲ್ಲ. ನೋ ಬಾಲ್ ಕೊಟ್ಟಿಲ್ಲ ಎಂದು ಅಭಿಮಾನಿಗಳು ವಿಡಿಯೊ ಸಮೇತ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ವಾದ ಮಂಡಿಸುತ್ತಿದ್ದಾರೆ.