ಮ್ಯಾಕ್ಸ್ವೆಲ್ ಐಪಿಎಲ್ನಲ್ಲಿ ಅಧಿಕ ಬಾರಿ ಶೂನ್ಯಕ್ಕೆ ಔಟಾದ ಬ್ಯಾಟರ್ಗಳ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನಕ್ಕೇರಿದ್ದಾರೆ.
ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಬ್ಯಾಟಿಂಗ್ ವಿಭಾಗದ ಜೀವಾಳವಾಗಿದ್ದ ಮ್ಯಾಕ್ಸ್ವೆಲ್ ಈ ಆವೃತ್ತಿಯಲ್ಲಿ ತಂಡದ ನಿರಸ ಪ್ರದರ್ಶನಕ್ಕೆ ಪ್ರಮುಖ ಕಾರಣಗಳಲ್ಲಿ ಒಬ್ಬರಾಗಿದ್ದಾರೆ. ಈ ಸೀಸನ್ನಲ್ಲಿ ಇದುವರೆಗೆ 6 ಪಂದ್ಯಗಳನ್ನಾಡಿರುವ ಮ್ಯಾಕ್ಸ್ವೆಲ್ ಒಮ್ಮೆ ಮಾತ್ರ ಎರಡಂಕ್ಕಿ ಮೊತ್ತ ದಾಟಿದ್ದಾರೆ. ಅದನ್ನು ಹೊರತುಪಡಿಸಿ ಎರಡು ಬಾರಿ ಮಾತ್ರ ಖಾತೆ ತೆರೆದಿರುವ ಮ್ಯಾಕ್ಸ್ವೆಲ್, ಉಳಿದ ಮೂರು ಪಂದ್ಯಗಳಲ್ಲಿ ಖಾತೆ ತೆರೆಯದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
Explained: ಸಿಡಿಲು-ಮಿಂಚಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ!
ಲೀಗ್ನ ಮೊದಲ ಪಂದ್ಯದಲ್ಲೇ ಸೊನ್ನೆ ಸುತ್ತಿದ ಗ್ಲೆನ್, ನಂತರ ನಡೆದ ಎರಡನೇ ಪಂದ್ಯದಲ್ಲಿ 3 ರನ್, ಮೂರನೇ ಪಂದ್ಯದಲ್ಲಿ 28 ರನ್ ಬಾರಿಸಿದರು. ನಂತರ ನಡೆದ 4ನೇ ಪಂದ್ಯದಲ್ಲಿ ಮತ್ತೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಐದನೇ ಪಂದ್ಯದಲ್ಲಿ 1 ರನ್ಗಳಿಗೆ ಸುಸ್ತಾಗಿದ್ದ ಮ್ಯಾಕ್ಸ್ವೆಲ್ ಆರನೇ ಪಂದ್ಯದಲ್ಲಿ ಮತ್ತೊಮ್ಮೆ ಶೂನ್ಯ ಸಾಧನೆ ಮಾಡಿದ್ದರು.
ಆಡಿರುವ 6 ಪಂದ್ಯಗಳಲ್ಲಿ ಇದುವರೆಗೆ ಮೂರು ಬಾರಿ ಸೊನ್ನೆ ಸುತ್ತಿರುವ ಮ್ಯಾಕ್ಸ್ವೆಲ್ ಐಪಿಎಲ್ನಲ್ಲಿ ಅಧಿಕ ಬಾರಿ ಶೂನ್ಯಕ್ಕೆ ಔಟಾದ ಬ್ಯಾಟರ್ಗಳ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನಕ್ಕೇರಿದ್ದಾರೆ. ಇದುವರೆಗೆ ಮ್ಯಾಕ್ಸ್ವೆಲ್ ಅವರ ಶೂನ್ಯ ಸಾಧನೆ 17 ರ ಗಡಿಗೆ ಬಂದು ನಿಂತಿದೆ.
ಪ್ರಸ್ತುತ ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ, ಆರ್ಸಿಬಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ತಲಾ 17 ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಈ ಪಟ್ಟಿಯಲ್ಲಿ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ