ಉಡುಪಿ: ಕುಂದಾಪುರದ ಹೆಂಗವಳ್ಳಿ ಸಮೀಪದ ರೆಸಾರ್ಟ್ನಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು, ಈಜುಕೊಳದಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿದ ಘಟನೆ ಜರುಗಿದೆ.
5 ದಶಕದಲ್ಲಿ ಕಾಂಗ್ರೆಸ್ ಮಾಡದ್ದನ್ನ ಕೇವಲ 1 ದಶಕದಲ್ಲೇ ಮೋದಿ ಮಾಡಿದ್ದಾರೆ – ಯತ್ನಾಳ್!
ಒಂಬತ್ತು ವರ್ಷದ ಅರೀಝ್ (9)
ಮೃತ ಬಾಲಕ. ಹೂಡೆ ಮೂಲದ ಕುಟುಂಬ ಪ್ರವಾಸಕ್ಕೆ ಇಲ್ಲಿನ ರೆಸಾರ್ಟ್ಗೆ ಬಂದಿತ್ತು. ಈ ವೇಳೆ ಅರೀಝ್ ಹಾಗೂ ಆತನ ಕುಟುಂಬ ಈಜುಕೊಳದಲ್ಲಿ ಆಟವಾಡುವಾಗ ಈ ದುರ್ಘಟನೆ ಸಂಭವಿಸಿದೆ. ಸ್ವಲ್ಪ ಸಮಯ ನೀರಿನಲ್ಲಿ ಆಟವಾಡಿದ್ದ ಅರೀಝ್ಗೆ ಬಳಿಕ ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ.
ಕೊಡಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ.