ಕಾರವಾರ:– 5 ದಶಕದಲ್ಲಿ ಕಾಂಗ್ರೆಸ್ ಮಾಡದ್ದನ್ನ ಕೇವಲ 1 ದಶಕದಲ್ಲೇ ಮೋದಿ ಮಾಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
LSG vs DC: ಟಾಸ್ ಗೆದ್ದ ಲಕ್ನೋ ಬ್ಯಾಟಿಂಗ್ ಆಯ್ಕೆ, ಸೋಲಿನ ಸುಳಿಯಿಂದ ಹೊರಬರುತ್ತಾ DC!
ಈ ಬಾರಿ ಲೋಕಸಭಾ ಚುನಾವಣೆ ನಡೆಯುತ್ತಿರೋದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗಾಗಿ ಅಲ್ಲ, ಈ ದೇಶವನ್ನು ರಕ್ಷಿಸಲು ಮತ್ತು ಹಿಂದೂತ್ವವನ್ನು ಉಳಿಸಲು ಎಂದು ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಮಾತಾಡಿದ ಯತ್ನಾಳ್, ಹಿಂದೂತ್ವ ಉಳಿಸಲು ಅವರು ಮಾಡಿದ್ದು ಸಾಮಾನ್ಯ ಕೆಲಸವಲ್ಲ, ಅವರಿಲ್ಲದೆ ಹೋಗಿದ್ದರೆ ಇವತ್ತು ಭಾರತದ ಹಿಂದೂಗಳೆಲ್ಲ ಸುನ್ನತಿ ಮಾಡಿಕೊಂಡು ದಾಡಿಬಿಟ್ಟುಕೊಂಡು ತಿರುಗಬೇಕಾಗುತಿತ್ತು ಎಂದರು. ಆ ಶಿವಾಜಿ ನಂತರ ಈಗ ದೇಶದಲ್ಲಿ ಮತ್ತೊಬ್ಬ ಶಿವಾಜಿ ಅವತರಿಸಿದ್ದಾರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ರೂಪದಲ್ಲಿ ಎಂದು ಯತ್ನಾಳ್ ಹೇಳಿದರು.
ಮೋದಿಯವರು ಏನು ಮಾಡಿದ್ದಾರೆ ಅಂತ ಕಾಂಗ್ರೆಸ್ ನವರು ಕೇಳುತ್ತಾರೆ. ಕಾಂಗ್ರೆಸ್ 50-60 ವರ್ಷಗಳಲ್ಲಿ ಮಾಡಲಾಗದ್ದನ್ನು ಮೋದಿ ಕೇವಲ 10 ವರ್ಷದಲ್ಲಿ ಮಾಡಿದ್ದಾರೆ ಎಂದರು.