ನಮ್ಮ ದೈನಂದಿನ ಜೀವನದಲ್ಲಿ ನಾವು ಮಾಡುವ ಸಣ್ಣ ತಪ್ಪುಗಳಿಂದಾಗಿ, ವಯಸ್ಸು 30 ದಾಟಿಲ್ಲವಾದರೂ, ವಯಸ್ಸಾದವರಂತೆ ಕಾಣುತ್ತೇವೆ. ಸಣ್ಣ ವಯಸ್ಸಿನಲ್ಲೇ ಸೌಂದರ್ಯವು ಮಾಸುತ್ತದೆ. ಅತಿ ಸಣ್ಣ ವಯಸ್ಸಿನಲ್ಲಿ ವಯಸ್ಸಾದಂತೆ ಕಾಣಲು ಈ ಕೆಲವು ಅಭ್ಯಾಸಗಳು ಕಾರಣವಾಗಿರಬಹುದು.
*ಸನ್ಸ್ಕ್ರೀನ್ ಬಳಸದೇ ಬಿಸಿಲಿನಲ್ಲಿ ಹೋಗುವುದು. ಇದರಿಂದಾಗಿ ಯುವಿ ಕಿರಣಗಳು ಚರ್ಮದ ವೇಗವರ್ಧಿತ ವಯಸ್ಸನ್ನು ಉಂಟುಮಾಡುತ್ತವೆ. ಪಿಗ್ಮೆಂಟೇಶನ್ ಮತ್ತು ಸುಕ್ಕುಗಳ ಸಮಸ್ಯೆಗಳಿಗೂ ಕಾರಣವಾಗುವುದಿದೆ.
ಸತತ ವಿಫಲ: ಎಸ್ಆರ್ಎಚ್ ವಿರುದ್ಧ ಕಣಕ್ಕಿಳಿಯಲ್ಲ ಗ್ಲೆನ್ ಮ್ಯಾಕ್ಸ್ವೆಲ್!
* ಎಲ್ಲರೂ ದೈನಂದಿನ ಜೀವನದಲ್ಲಿ ಒತ್ತಡವನ್ನು ಅನುಭವಿಸುತ್ತಾರೆ. ಒತ್ತಡವು ಹೆಚ್ಚಾದಾಗ ಹಾರ್ಮೋನ್ ಅಸಮತೋಲನ ಉಂಟಾಗಿ, ಇದು ಚರ್ಮದ ಮೇಲೂ ಪರಿಣಾಮ ಬೀರಿ, ನಿರ್ಜೀವವಾಗಿ ಕಾಣುವಂತೆ ಮಾಡುತ್ತದೆ. ಚರ್ಮದ ಕಾಂತಿಯು ಕುಂದುತ್ತದೆ.
* ಒಣ ಚರ್ಮವು ವಯಸ್ಸಾಗಿರುವಂತೆ ಕಾಣಿಸುತ್ತದೆ. ದೇಹದಲ್ಲಿರುವ ಚರ್ಮವು ತೇವಾಂಶವನ್ನು ಕಳೆದುಕೊಳ್ಳುವುದರಿಂದ ಚರ್ಮ ಸುಕ್ಕುಗಟ್ಟುತ್ತದೆ. ಹೆಚ್ಚು ನೀರು ಕುಡಿಯುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
* ಸರಿಯಾಗಿ ನಿದ್ದೆ ಮಾಡದೇ ಇರುವುದು ಇಲ್ಲವಾದರೆ ರಾತ್ರಿ ತಡವಾಗಿ ಮಲಗುವುದು. ಈ ಅಭ್ಯಾಸವು ಚರ್ಮದ ಮೇಲೆ ಒತ್ತಡವನ್ನು ಉಂಟುಮಾಡಿ, ಸುಕ್ಕುಗಳು ಹಾಗೂ ಕಣ್ಣಿನ ಸುತ್ತ ಕಪ್ಪು ವರ್ತುಲಗಳಿಗೂ ಕಾರಣವಾಗುತ್ತದೆ. ಹೀಗಾಗಿ ನಿದ್ದೆಯನ್ನು ಸರಿಯಾಗಿ ಮಾಡುವುದು ಒಳಿತು.
* ಮದ್ಯಪಾನ ಮತ್ತು ಧೂಮಪಾನದಂತಹ ಕೆಟ್ಟ ಅಭ್ಯಾಸಗಳು ಚರ್ಮಕ್ಕೆ ಗಂಭೀರ ಹಾನಿಯನ್ನುಂಟುಟು ಮಾಡುವ ಸಾಧ್ಯತೆಯೇ ಹೆಚ್ಚು.
* ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಅತಿಯಾದ ಬಳಕೆ ಮಾಡುವುದರಿಂದಲೂ ಚರ್ಮದ ಆರೋಗ್ಯವು ಹಾಳಾಗುತ್ತದೆ. ಕೆಲವರಿಗೆ ಅಲರ್ಜಿ ಹಾಗೂ ತುರಿಕೆಯಂತಹ ಸಮಸ್ಯೆಗಳುಗಳು ಉಂಟಾಗುತ್ತದೆ.