ಈ ಬಾರಿಯ IPL ಪಂದ್ಯದಲ್ಲಿ ಆಡಿರುವ 6 ಪಂದ್ಯದಲ್ಲಿ RCB 5 ಸೋಲು ಕಂಡಿದೆ. ಗ್ಲೆನ್ ಮ್ಯಾಕ್ಸ್ವೆಲ್ ಅವರ ಕಳಪೆ ಫಾರ್ಮ್ ಆರ್ ಸಿಬಿ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಕೇವಲ 32 ರನ್ ಗಳಿಸಿದ್ದಾರೆ. 5.33 ಸರಾಸರಿ ಇದ್ದು, 94.11 ಸ್ಟ್ರೈಕ್ರೇಟ್ ಆಗಿದೆ. ಮೂರು ಬಾರಿ ಡಕೌಟ್ ಆಗಿದ್ದು, ಒಂದು ಪಂದ್ಯದಲ್ಲಿ ಮಾತ್ರ 28 ರನ್ ಗಳಿಸಿದ್ದಾರೆ. ಉಳಿದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 1 ರನ್ ಮತ್ತು 3 ರನ್ ಗಳಿಸಿದ್ದಾರೆ
ಪೀಣ್ಯ ದಾಸರಹಳ್ಳಿ: ಮನೆ ಮನೆಗೆ ಪ್ರಚಾರಕ್ಕೆ ಶಾಸಕ ಎಸ್ ಮುನಿರಾಜು ಚಾಲನೆ!
ಅವರ ಕಳಪೆ ಫಾರ್ಮ್ನಿಂದ ಉಳಿದ ಬ್ಯಾಟರ್ ಗಳ ಮೇಲಿನ ಒತ್ತಡ ಹೆಚ್ಚಾಗಿದೆ. ಮುಂಬೈ ವಿರುದ್ಧ ಸೋತ ಬಳಿಕ ಆರ್ಸಿಬಿ ಮುಂದಿನ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಸೋಮವಾರ (ಏಪ್ರಿಲ್ 15) ಆರ್ ಸಿಬಿ ತವರಿನಲ್ಲಿ ಈ ಪಂದ್ಯವನ್ನಾಡಲಿದೆ.
ಸನ್ರೈಸಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಆಡುವುದು ಅನುಮಾನವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಮ್ಯಾಕ್ಸ್ವೆಲ್ ಗಾಯಗೊಂಡಿದ್ದಾರೆ. ಸೂರ್ಯಕುಮಾರ್ ಅವರ ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಮ್ಯಾಕ್ಸ್ವೆಲ್ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.
ಆದರೆ ಅವರ ಗಾಯದ ತೀವ್ರತೆ ಹೇಗಿದೆ ಇನ್ನೂ ಗೊತ್ತಿಲ್ಲ, ಆದರೂ ಅವರು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಅನುಮಾನವಾಗಿದೆ. 6 ಪಂದ್ಯಗಳಲ್ಲಿ ಸತತವಾಗಿ ವೈಫಲ್ಯವಾಗಿರುವ ಕಾರಣ, ಅವರು ಮುಂದಿನ ಪಂದ್ಯದಲ್ಲಿ ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದು, ಅವರ ಬದಲಾಗಿ ಕ್ಯಾಮೆರಾನ್ ಗ್ರೀನ್ ಅಥವಾ ಲಾಕಿ ಫರ್ಗ್ಯುಸನ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಒಂದು ವೇಳೆ ಮ್ಯಾಕ್ಸ್ವೆಲ್ ಆಡದೇ ಇದ್ದರೆ, ಅವರ ಬದಲಾಗಿ ಗ್ರೀನ್ ಆಡಿಸುವ ಬದಲಿ ಲಾಕಿ ಫರ್ಗ್ಯುಸನ್ ಆಡಿಸುವ ಬಗ್ಗೆ ಚಿಂತಿಸಬೇಕಿದೆ. ಫಾಫ್ ಡುಪ್ಲೆಸಿಸ್, ರಜತ್ ಪಾಟಿದಾರ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಫಾರ್ಮ್ ಕಂಡುಕೊಂಡಿದ್ದಾರೆ.
ಸದ್ಯದ ಮಟ್ಟಿ ಆರ್ ಸಿಬಿ ಬ್ಯಾಟಿಂಗ್ ಬಲಿಷ್ಠವಾಗೇ ಇದೆ, ಆದರೆ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಸುಧಾರಣೆ ಕಾಣಬೇಕಿದೆ. ಮ್ಯಾಕ್ಸ್ವೆಲ್ ಬದಲಾಗಿ ಲಾಕಿ ಫರ್ಗ್ಯುಸನ್ ಆಡಿದರೆ, ಬೌಲಿಂಗ್ ವಿಭಾಗಕ್ಕೆ ಬಲ ಬರಲಿದೆ. ಈ ಆವೃತ್ತಿಯಲ್ಲಿ ವಿಫಲವಾಗಿರುವ ಮೊಹಮ್ಮದ್ ಸಿರಾಜ್ ಅವರಿಗೂ ವಿಶ್ರಾಂತಿ ನೀಡಿ, ಯಶ್ ದಯಾಳ್ ಅವರನ್ನು ಆಡಿಸಿದರೆ ಚಿನ್ನಸ್ವಾಮಿ ಅಂಗಳದಲ್ಲಿ ಆರ್ ಸಿಬಿ ಗೆಲ್ಲಲು ಹೋರಾಟ ಕೊಡಬಹುದು.