ಸೀಕ್ರೇಟ್ ಆಗಿ ಮದುವೆಯಾದ ಬಾಲಿವುಡ್ ನಟಿ ತಾಪ್ಸಿ ಪನ್ನು ಮದುವೆಯ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ನವ ವಧುವನ್ನು ಕಂಡ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.
ತಾಪ್ಸಿ ಮದುವೆಗೆ ಆಪ್ತರಿಗಷ್ಟೇ ಆಹ್ವಾನಿಸಿದ್ದು ಮದುವೆಯ ಬಳಿಕವು ಮದುವೆಯ ಫೋಟೋ ಹಾಗೂ ವಿಡಿಯೋವನ್ನು ಶೇರ್ ಮಾಡಲು ನಟಿ ನಿರಾಕರಿಸಿದ್ದಾರೆ. ಬ್ಲರ್ ಆಗಿರುವ ವಿಡಿಯೋವೊಂದು ಲೀಕ್ ಆಗಿ ಮದುವೆ ಸಮಾಚಾರ ತಿಳಿದಿತ್ತು. ಹೀಗಾಗಿ ನಟಿಯ ಮದುವೆಯ ಫೋಟೋಗಾಗಿ ಕಾಯ್ತಿದ್ದವರಿಗೆ ನಟಿ ನಿರಾಸೆ ಮೂಡಿಸಿದ್ದಾರೆ.
ತಾಪ್ಸಿ ಉದಯ್ಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿರೋದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ತಮ್ಮ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಅವರು ನೀಡಿರಲಿಲ್ಲ. ಮದುವೆ ಫೋಟೋ ಕೂಡ ಶೇರ್ ಮಾಡಿ ಪತಿ ಬಗ್ಗೆ ಮಾತನಾಡಿಲ್ಲ. ಇದೀಗ ಡ್ಯಾನ್ಸ್ ಮಾಡುತ್ತಾ ವೇದಿಕೆ ಏರಿ ಮಥಾಯಸ್ ಬೋ ಅವರಿಗೆ ಹಾರ ಹಾಕಿ ಖುಷಿಯಿಂದ ಮದುವೆ ಆಗುತ್ತಿರುವ ವಿಡಿಯೋ ವೈರಲ್ ಆಗಿತ್ತು.