ರಾಜಸ್ಥಾನ್ ಗೆಲುವಿನ ಓಟಕ್ಕೆ ಗುಜರಾತ್ ತಂಡವು ಬ್ರೇಕ್ ಹಾಕಿದೆ. ಸತತ ನಾಲ್ಕು ಗೆಲುವು ದಾಖಲಿಸಿದ್ದ ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಸೋಲು ಕಂಡಿದೆ.
ರಾಜಸ್ಥಾನ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 197 ರನ್ಗಳ ಗುರಿ ಬೆನ್ನಟ್ಟಿದ ಗುಜರಾತ್, ಪಂದ್ಯದ ಕೊನೆಯ ಇನಿಂಗ್ಸ್ನಲ್ಲಿ ಏಳು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
Raksharamaiah: ಚಿಕ್ಕಬಳ್ಳಾಪುರದಲ್ಲಿ ಮೋದಿ ಹೆಸರು ಕೆಲಸ ಮಾಡಲ್ಲ – ರಕ್ಷಾರಾಮಯ್ಯ !
ಮೊದಲ ಮೂರು ಓವರ್ಗಳಲ್ಲಿ ನಿಖರ ದಾಳಿ ಸಂಘಟಿಸಿದ ರಾಜಸ್ಥಾನದ ವೇಗದ ಬೌಲರ್ ಕುಲದೀಪ್ ಸೆನ್, ತಮ್ಮ ಅಂತಿಮ ಓವರ್ನಲ್ಲಿ 20 ರನ್ ಬಿಟ್ಟುಕೊಡುವ ಮೂಲಕ ದುಬಾರಿ ಎನಿಸಿದರು. ಆ ಮೂಲಕ ಹೀರೊದಿಂದ ವಿಲನ್ ಆದರು. ಈ ಬಾರಿಯ ಐಪಿಎಲ್ನಲ್ಲಿ ಮೊದಲ ಬಾರಿ ಆಡಿದ ಸೆನ್, ಸಾಯಿ ಸುದರ್ಶನ್ (35), ಮ್ಯಾಥ್ಯೂ ವೇಡ್ (4) ಹಾಗೂ ಅಭಿನವ್ ಮನೋಹರ್ (1) ವಿಕೆಟ್ಗಳನ್ನು ಗಳಿಸಿದರು. ಆದರೂ ಅಂತಿಮವಾಗಿ ನಾಲ್ಕು ಓವರ್ಗಳಲ್ಲಿ 41 ರನ್ ಬಿಟ್ಟುಕೊಟ್ಟರು.
ಮತ್ತೊಂದೆಡೆ ಟ್ರೆಂಟ್ ಬೌಲ್ಟ್ಗೆ ಕೇವಲ ಎರಡು ಓವರ್ ಮಾತ್ರ ನೀಡಿರುವುದು ನಾಯಕ ಸಂಜು ಸ್ಯಾಮ್ಸನ್ ಟೀಕೆಗೆ ಗುರಿಯಾಗಿದ್ದಾರೆ.
ನಾಯಕನ ಆಟವಾಡಿದ ಶುಭಮನ್ ಗಿಲ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 44 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 72 ರನ್ ಗಳಿಸಿದರು. ಅಲ್ಲದೆ ಐಪಿಎಲ್ನಲ್ಲಿ 3,000 ರನ್ ಕ್ಲಬ್ ಸೇರಿದರು.
ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ರಶೀದ್ ಖಾನ್, ರಾಜಸ್ಥಾನಕ್ಕೆ ಬಲವಾದ ಪೆಟ್ಟು ನೀಡಿದರು. ಮೊದಲು ನಾಲ್ಕು ಓವರ್ನಲ್ಲಿ 18 ರನ್ ಮಾತ್ರ ಬಿಟ್ಟುಕೊಟ್ಟಿದ್ದ ರಶೀದ್, ಜೋಸ್ ಬಟ್ಲರ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಬಳಿಕ ನಿರ್ಣಾಯಕ ಹಂತದಲ್ಲಿ ಬ್ಯಾಟ್ ಬೀಸಿದ ರಶೀದ್, ಕೇವಲ 11 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿ (11 ಬೌಂಡರಿ, 4 ಸಿಕ್ಸರ್) ತಂಡಕ್ಕೆ ಗೆಲುವು ಒದಗಿಸಿಕೊಟ್ಟರು.