ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿಗೆ ಇದೆಯೇ ಸ್ಥಾನ ಎಂಬ ಪ್ರಶ್ನೆಗೆ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹೊಗಳಿದ್ದಾರೆ.
ರಾಗಿ ಹಿಟ್ಟಿನಲ್ಲಿ ಮಾಡಿ ಪೂರಿ; ಈ ಸಾಗು ಜೊತೆಗೆ ತಿಂತಿದ್ರೆ ಸಖತ್ ಟೇಸ್ಟಿ!
“ವಿರಾಟ್ ಕೊಹ್ಲಿ ಈ ಪೀಳಿಗೆಗೆ ಮಾನದಂಡವನ್ನು ಹೊಂದಿಸುತ್ತಾರೆ. 15 ವರ್ಷಗಳ ವೃತ್ತಿ ಜೀವನದಲ್ಲಿ ಅವರು ಮಾಡಿರುವ ಸಾಧನೆ ಅದ್ಭುತ. ತಮ್ಮ ಫಿಟ್ನೆಸ್ ಮಟ್ಟದಲ್ಲಿ ಒಂದು ಉದಾಹರಣೆಯಾಗಿರಿಸಿದ್ದಾರೆ. ಕೊಹ್ಲಿಯ ಫಿಟ್ನೆಸ್ ಬ್ಲೂಪ್ರಿಂಟ್ ಇಡೀ ಭಾರತೀಯ ಕ್ರಿಕೆಟ್ ಮೇಲೆ ಪ್ರಭಾವ ಬೀರಿದೆ” ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.
ಎಂಎಸ್ ಧೋನಿಯನ್ನು ಶ್ರೇಷ್ಠ ನಾಯಕ ಎಂದು ಕರೆಯುತ್ತೀರಿ. ಏಕೆಂದರೆ ಅವರಿಗೆ ಆಟದ ಬಗ್ಗೆ ತಿಳುವಳಿಕೆ, ಆಟದ ಬಗ್ಗೆ ಸಮರ್ಪಣೆ ಇತ್ತು. ಏನಾಗುತ್ತಿದೆ, ಆಟ ಹೇಗೆ ಬದಲಾಗುತ್ತಿದೆ ಎಂಬುದು ಅವರಿಗೆ ಚೆನ್ನಾಗಿ ಅರಿವಿಗೆ ಬಂದಿತ್ತು. ಆಟದ ಬಗ್ಗೆ ಎಲ್ಲವನ್ನೂ ತಿಳಿದಿದ್ದ ಆಟಗಾರ ಅವರು. ಅದಕ್ಕಾಗಿಯೇ ನಾವು ಅವರನ್ನು ಶ್ರೇಷ್ಠ ನಾಯಕ ಎಂದು ಕರೆಯುತ್ತೇವೆ” ಎಂದಿದ್ದಾರೆ.
ಇನ್ನು ಅಗರ್ಕರ್ ನೀಡಿರುವ ಈ ಹೇಳಿಕೆಗಳನ್ನು ಗಮನಿಸಿದರೆ ವಿರಾಟ್ ಕೊಹ್ಲಿ T20 ವಿಶ್ವಕಪ್ 2024 ತಂಡದ ಭಾಗವಾಗಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.