ತಮಿಳು ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿಕೊಡೋ ಘೋಷಣೆ ಮಾಡಿದ್ದಾರೆ. ಅವರು ಸದ್ಯ ಘೋಟ್ ಸಿನಿಮಾದಲ್ಲಿ ಕೆಲಸದಲ್ಲಿ ಬ್ಯುಸಿಯಾಗಿರೋ ವಿಜಯ್ ನಟನೆಯ 69ನೇ ಸಿನಿಮಾ ಸದ್ಯದಲ್ಲೇ ಘೋಷಣೆ ಆಗಲಿದೆ. ಇದು ಅವರ ಕೊನೆಯ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ. ಇದೀಗ ವಿಜಯ್ ಚೆನ್ನೈನಲ್ಲಿ ಸಾಯಿ ಬಾಬಾ ಮಂದಿರ ನಿರ್ಮಾಣ ಮಾಡಿದ್ದಾರೆ. ಇದು ಅವರ ತಾಯಿಗಾಗಿ ನಿರ್ಮಾಣ ಮಾಡಿದ ಮಂದಿರವಾಗಿದೆ.
ವಿಜಯ್ ಚೆನ್ನೈನಲ್ಲಿ ಜಾಗ ಹೊಂದಿದ್ದರು. ಅಲ್ಲಿ ಈ ಮಂದಿರ ನಿರ್ಮಾಣ ಆಗಿದೆ. ವಿಜಯ್ ತಾಯಿ ಶೋಭಾ ಅವರಿಗೆ ದೇವಸ್ಥಾನ ನಿರ್ಮಾಣ ಮಾಡಬೇಕು ಎನ್ನುವ ಕನಸಿದ್ದು, ಆ ಕನಸು ಈಗ ಈಡೇರಿದೆ. ಚೆನ್ನೈನ ಕೊರಟ್ಟೂರ್ನಲ್ಲಿ ಈ ಮಂದಿರ ನಿರ್ಮಾಣ ಆಗಿದೆ.
ಈ ವರ್ಷ ಫೆಬ್ರವರಿಯಲ್ಲಿ ಈ ಮಂದಿರ ನಿರ್ಮಾಣದ ಕಾರ್ಯ ಪೂರ್ಣಗೊಂಡಿದೆ ಎನ್ನಲಾಗಿದೆ. ಇತ್ತೀಚೆಗೆ ವಿಜಯ್ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸದ್ಯ ವಿಜಯ್ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಸಿನಿಮಾದಲ್ಲಿ ನಟಿಸುತ್ತಿದ್ದು ಚಿತ್ರದಲ್ಲಿ ವಿಜಯ್ ಗೆ ಜೋಡಿಯಾಗಿ ನಟಿ ತ್ರಿಶಾ ಕಾಣಿಸಿಕೊಳ್ತಿದ್ದಾರೆ.