ಯುಗಾದಿ ಬಳಿಕವೂ ಚಿನ್ನದ ಬೆಲೆ ಏರಿಕೆ ನಿಂತಿಲ್ಲ. ಯುಗಾದಿ ದಿನದಂದು ಬೆಳ್ಳಿ ಬೆಲೆ ಗ್ರಾಮ್ಗೆ 1 ರೂನಷ್ಟು ಹೆಚ್ಚಿತ್ತು. ಚಿನ್ನವಂತೂ ಗ್ರಾಮ್ಗೆ 30 ರೂ ಹೆಚ್ಚಾಗಿತ್ತು. ಈ ಬೆಲೆ ಏರಿಕೆಯ ಓಟ ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ಸ್ಪಷ್ಟ ಇಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 65,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 71,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,450 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 65,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,375 ರುಪಾಯಿಯಲ್ಲಿ ಇದೆ.
ಬೇರೆಯವರು ನಿಮ್ಮ ಸಿಮ್ ಕಾರ್ಡ್ ಬಳಸದಿರಲು ಮೊಬೈಲ್ ನಲ್ಲೇ ಈ ಸೆಟ್ಟಿಂಗ್ ಮಾಡಿ!
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 10ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,730 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,730 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 837.50 ರೂ