ಬೆಂಗಳೂರು/ನವದೆಹಲಿ:– ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯ ಜೀವನಕ್ಕೆ ಅದರದ್ದೇ ಆದ ಗೌರವ ಇದೆ. ಅಲ್ಲದೆ ಮತ್ತೊಬ್ಬರಿಗೆ ನಮ್ಮ ಸಂಸ್ಕೃತಿ ಮಾದರಿ ಆಗಿದೆ
ಇಂತಹ ವೇಳೆಯಲ್ಲೇ ವಿಚಿತ್ರ ಅಧ್ಯಯನ ವೊಂದು ನಿಮ್ಮ ಸಂಗಾತಿಯೊಡನೆ ನೀವು ನಿಯಮಿತ ಪ್ರಮಾಣದ ಮದ್ಯಪಾನ ಮಾಡಿದ್ರೆ ಹೆಚ್ಚು ಕಾಲ ಬದುಕುತ್ತೀರಿ ಎಂದು ಹೇಳಿದೆ.
PUC ಮತ್ತು SSLC ಪಾಸಾದವರಿಗೆ ನವೋದಯ ವಿದ್ಯಾಲಯದಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅರ್ಜಿ ಸಲ್ಲಿಸಿ
ಮೊದಲೇ ತನ್ನ ಗಂಡ ಕುಡಿದರೆ ಸಹಿಸದ ಹೆಂಡತಿ ಗಂಡನ ಜೊತೆಯಲ್ಲೇ ಕೂತು ತಾನು ಕುಡಿದರೆ ಜೀವನ ಉತ್ತಮ ಎಂದು ವಿಚಿತ್ರ ಅಧ್ಯಯನ ಒಂದು ತಿಳಿಸಿದ್ದು, ನಿಜಕ್ಕೂ ಇದು ವಿಚಿತ್ರವಾಗಿದೆ.
ಮಿಚಿಗನ್ ವಿಶ್ವವಿದ್ಯಾನಿಲಯದ ಸಂಶೋಧನಾ ಪ್ರಾಧ್ಯಾಪಕರಾದ ಡಾ. ಕಿರಾ ಬರ್ಡಿಟ್ ಈ ವಿಚಾರವನ್ಅನು ವರು ತಮ್ಮ ಸಂಶೋಧನೆಯಲ್ಲಿ ಸಾಬೀತು ಪಡಿಸಿದ್ದಾರೆ.
ಈ ಸಂಶೋಧನೆಯನ್ನು ಕಳೆದ ಎರಡು ದಶಕಗಳಲ್ಲಿ ಸುಮಾರು 4,500 ದಂಪತಿಗಳನ್ನೊಳಗೊಂಡ ಸುದೀರ್ಘ ಅಧ್ಯಯನ ನಡೆಸಿ ವಿಚಾರ ಮಂಡಿಸಿದ್ದಾರೆ.
ಅಧ್ಯಯನದಲ್ಲಿ, ಒಟ್ಟಿಗೆ ಮದ್ಯಪಾನ ಮಾಡುವ ಅಭ್ಯಾಸವನ್ನು ಹೊಂದಿರುವ ದಂಪತಿಗಳು ಸೇವಿಸದ ದಂಪತಿಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂಬ ಅಂಶ ಸಾಬೀತಾಗಿದೆ
ಜೊತೆಗೆ ನಿಮ್ಮ ಸಂಗಾತಿಯೊಂದಿಗೆ ಕುಡಿಯುವ ಅಭ್ಯಾಸವು ಸಂಬಂಧದಲ್ಲಿ ಅನ್ಯೋನ್ಯತೆಯನ್ನು ಹೆಚ್ಚಿಸಬಹುದು. ಈ ಅಭ್ಯಾಸ ಹೊಂದಿರುವ ಜನರು ಉತ್ತಮ ಹೊಂದಾಣಿಕೆಯನ್ನು ಹಂಚಿಕೊಳ್ಳುತ್ತಾರೆ ಎಂಬ ಅಂಶವೂ ಹೊರಬಿದ್ದಿದೆ.
ಒಟ್ಟಿಗೆ ಕುಡಿಯಲು ಇಷ್ಟಪಡುವ ಜೋಡಿಗ ವೈವಾಹಿಕ ಜೀವನವು ಹೆಚ್ಚು ತೃಪ್ತಿಕರವಾಗಿದೆ ಎಂದು ಸಂಶೋಧನೆ ಹೇಳುತ್ತದೆ.