ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 4 ರಲ್ಲೂ ಸೋತಿರುವ ಆರ್ ಸಿ ಬಿಗೆ ಪ್ಲೇ ಆಫ್ ಪ್ರವೇಶದ ಹಾದಿ ಕಠಿಣವಾಗುತ್ತಿದೆ. ಮತ್ತೊಂದೆಡೆ ಮುಂದೆ ಆರ್ ಸಿ ಬಿ ಪಾಲಿಗೆ 9 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ
ಇದುವರೆಗೆ ನಡೆದಿರುವ 5 ಪಂದ್ಯಗಳ ಪೈಕಿ ನಾಲ್ಕರಲ್ಲಿ ಆರ್ ಸಿ ಬಿ ಸೋತಿದೆ. ಜೊತೆಗೆ 1 ಗೆಲುವು ಸಾಧಿಸಿದ್ದು, ಕೇವಲ 2 ಅಂಕಗಳ ಪಡೆದಿರುವ ತಂಡ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ಯಾವುದೇ ತಂಡವಾದರೂ ಪ್ಲೇ ಆಫ್ ಪ್ರವೇಶಿಸಲು ಕನಿಷ್ಠ 8 ಪಂದ್ಯಗಳನ್ನಾದರೂ ಗೆಲ್ಲಲೇಬೇಕು. ಅಂದರೆ ಇಷ್ಟು ಪಂದ್ಯಗಳನ್ನು ಗೆದ್ದರೆ ಒಟ್ಟು 16 ಅಂಕಗಳು ಲಭಿಸುತ್ತವೆ.
ಈಗಾಗಲೇ ಆರ್ ಸಿ ಬಿ ಒಂದು ಪಂದ್ಯದಲ್ಲಿ ಗೆದ್ದಿದ್ದು, ಇನ್ನು 7 ಪಂದ್ಯಗಳನ್ನು ಗೆಲ್ಲಲೇ ಬೇಕು. ಕೇವಲ ಗೆದ್ದರೆ ಸಾಲದು, ನೆಟ್ ರನ್ ರೇಟ್ ಕೂಡ ಉತ್ತಮವಾಗಿ ಕಾಯ್ದುಕೊಂಡರೆ ಪ್ಲೇ ಆಫ್ ಪ್ರವೇಶಿಸಲು ಸಾಧ್ಯ
ಒಂದು ವೇಳೆ ಇನ್ನುಳಿದರುವ 9 ಪಂದ್ಯಗಳಲ್ಲೂ ಗೆದ್ದರೆ ಯಾವುದೇ ಸಮಸ್ಯೆ ಇಲ್ಲದೆ, ನೇರವಾಗಿ ಪ್ಲೇ ಆಫ್ ಪ್ರವೇಶಿಸಬಹುದು. ಪ್ರಸ್ತುತ ಎಲ್ಲಾ ತಂಡಗಳು ಉತ್ತಮ ಪ್ರದರ್ಶನ ತೋರುತ್ತಿದೆ. ಆದರೆ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಕೆಳಮುಖವಾಗುತ್ತಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.