ಬೆಂಗಳೂರು :- ವಾರಾಂತ್ಯದಲ್ಲಿ 3 ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಮೂಲಕಬಿಸಿಲಿನಿಂದ ಬಳಲಿ ಬೆಂಡಾದವರಿಗೆ ಗುಡ್ ನ್ಯೂಸ್ ಸಿಕ್ಕಿದೆ.
IPL 2024: ಗೆಲುವಿನ ಟ್ರ್ಯಾಕ್ ಗೆ ಮರಳಿದ CSK – ಮೊದಲ ಸೋಲು ಕಂಡ ಕೆಕೆಆರ್
ಸದ್ಯದ ವಾತಾವರಣದ ಪ್ರಕಾರ ಎಪ್ರಿಲ್ 13 ರಿಂದ ಎಪ್ರಿಲ್ 15 ರವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ವಿಶೇಷವಾಗಿ ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಮುಂತಾದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಅಧಿಕವಾಗಿದೆ.
ಜೊತೆಗೆ ಅತೀ ಹೆಚ್ಚು ಉಷ್ಣಾಂಶ ದಾಖಲಾಗುತ್ತಿರುವ ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲೂ ಮಳೆ ನಿರೀಕ್ಷಿಸಲಾಗಿದೆ
ಸದ್ಯದ ವಾತಾವರಣ ಮುಂದುವರಿದರಷ್ಟೇ ಈ ಮಳೆಯ ಸಾಧ್ಯತೆ ಕಾಣಿಸುತ್ತಿವೆ ಮೋಡದ ಚಲನೆಯಲ್ಲಿ ಯಾವುದೇ ಬದಲಾವಣೆ ಆಗದಿರುವುದರಿಂದ ಎಪ್ರಿಲ್ ಮಧ್ಯ ಅಥವಾ ಈ ವಾರಾಂತ್ಯಕ್ಕೆ ಮಳೆ ನಿರೀಕ್ಷಿಸುವಂತೆ ಮಾಡಿದೆ