ಆರ್ಸಿಬಿಯಿಂದ ಕೊಹ್ಲಿನ ಬಿಟ್ಟು ಬಿಡಿ ಪ್ಲೀಸ್ ಎಂದು ವಿರಾಟ್ ಅಭಿಮಾನಿಗಳಿಂದಲೇ ಕೂಗು ಶುರುವಾಗಿದೆ. ಕಳೆದ 16 ಸೀಸನ್ ಗಳಿಗಿಂತಲೂ ಈ ಬಾರಿ ಆರ್ಸಿಬಿ ಅಭಿಮಾನಿಗಳು ಸಾಕಷ್ಟು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಆರ್ಸಿಬಿ ಪ್ರಾಂಚೈಸಿ ಪರ ಕೊಪ್ ವ್ಯಕ್ತಪಡಿಸುತ್ತಿದ್ದು, ಪ್ರಾಂಚೈಸಿಯನ್ನು ಬದಲಿಸಿ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮದ ಮೂಲಕ ಬೇಡಿಕೆ ಇಡುತ್ತಿದ್ದಾರೆ.
ಜೈಲಿಂದ ರಿಲೀಸ್ ಆದ ಬಳಿಕ ಸೋನು ಕೂಲ್, ಕೂಲ್! – ಜ್ಯೂಸ್ ಕುಡಿದು ರಿಲ್ಯಾಕ್ಸ್!
ಐಪಿಎಲ್ ಅಂಕಪಟ್ಟಿಯಲ್ಲಿ ಆರ್ಸಿಬಿ ತಂಡವು 2 ಅಂಕಗಳೊಂದಿಗೆ -0.843 ರೇಟ್ ಜೊತೆಗೆ 8ನೇ ಸ್ಥಾನದಲ್ಲಿದೆ. ಆದರೆ ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಒಬ್ಬರನ್ನು ಬಿಟ್ಟರೆ ಉಳಿದ ಯಾರೊಬ್ಬ ಆಟಗಾರನೂ ಸಹ ಉತ್ತಮವಾಗಿ ಪ್ರದರ್ಶನ ನೀಡುತ್ತಿಲ್ಲ.
ಇದರಿಂದಾಗಿ ಕಳೆದ 16 ಸೀಸನ್ ಗಳಿಗಿಂತಲೂ ಈ ಬಾರಿ ಆರ್ಸಿಬಿ ಅಭಿಮಾನಿಗಳು ಸಾಕಷ್ಟು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಆರ್ಸಿಬಿ ಪ್ರಾಂಚೈಸಿ ಪರ ಕೊಪ್ ವ್ಯಕ್ತಪಡಿಸುತ್ತಿದ್ದು, ಪ್ರಾಂಚೈಸಿಯನ್ನು ಬದಲಿಸಿ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮದ ಮೂಲಕ ಬೇಡಿಕೆ ಇಡುತ್ತಿದ್ದಾರೆ. ಇದರ ಜೊತೆಗೆ ಹೊಸ ಮನವಿಯನ್ನೂ ಮಾಡುತ್ತಿದ್ದಾರೆ
ಹೌದು, ಈ ಬಾರಿ ಆರ್ಸಿಬಿ ಪರ ಕೊಹ್ಲಿ ಈ ಬಾರಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, 5 ಪಂದ್ಯಗಳಲ್ಲಿ 105.33ರ ಸರಾಸರಿಯೊಂದಿಗೆ 316 ರನ್ ಸಿಡಿಸುವ ಮೂಲಕ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಅಲ್ಲಿಗೆ ಅರ್ಥವಾಗುತ್ತಿದೆ. ತಂಡದಲ್ಲಿ ಕೊಹ್ಲಿಯನ್ನು ಬಿಟ್ಟು ಮತ್ಯಾವ ಆಟಗಾರರೂ ಉತ್ತಮ ಆಟವಾಡುತ್ತಿಲ್ಲ.
ಇದೇ ವಿಚಾರ ಇದೀಗ ವಿರಾಟ್ ಕೊಹ್ಲಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಎಲ್ಲಾ ಸೀಸನ್ ಗಳಲ್ಲಿಯೂ ಕೊಹ್ಲಿ ಆರ್ಸಿಬಿ ಪರ ಉತ್ತಮವಾಗಿ ಆಡುತ್ತಿದ್ದಾರೆ. ಅಲ್ಲದೇ ಕೊಹ್ಲಿ ಕಳೆದ 16 ಸೀಸನ್ ನಿಂದಲೂ ಸಹ ಆರ್ಸಿಬಿ ಪರ ಆಟವಾಡುತ್ತಿದ್ದು, ಈವರೆಗೂ ಕೊಹ್ಲಿ ಒಮ್ಮೆಯೂ ಕಪ್ ಎತ್ತುವ ಭಾಗ್ಯ ದೊರಕಲಿಲ್ಲ.
ಕೊಹ್ಲಿ ಒಬ್ಬರೇ ಎಷ್ಟು ಎಂದು ಆಟವಾಡುತ್ತಾರೆ? ಅವರ ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ದೊರಕುತ್ತಿಲ್ಲ, ಅವರಿಗೆ ಸರಿಯಾದ ಸಾಥ್ ಸಿಗುತ್ತಿಲ್ಲ ಎಂದೆಲ್ಲಾ ಅಭಿಮಾನಿಗಳುಇ ಬೇಸರ ವ್ಯಕ್ತಪಡಿಸುತ್ತಿದ್ದು, ಅವರನ್ನು ಮುಂದಿನ ವರ್ಷ ಮೆಗಾ ಹರಾಜಿನ ವೇಳೆಗೆ ಆರ್ಸಿಬಿ ತಂಡದಿಂದ ಕೈಬಿಟ್ಟುಬಿಡಿ. ಅವರನ್ನು ದಯಮಾಡಿ ರಿಟೈನ್ ಮಾಡಕೊಳ್ಳಬೇಡಿ ಎಂದು ಬೇಡಿಕೊಳ್ಳುತ್ತಿದ್ದಾರೆ
ಹೌದು, ಪ್ಲೀಸ್ ಆರ್ಸಿಬಿ ಪ್ರಾಂಚೈಸಿ ಕೊಹ್ಲಿಯನ್ನು ಆರ್ಸಿಬಿ ಇಂದ ಬಿಟ್ಟುಬಿಡಿ. ಅವರು ಬೇರೆ ತಂಡದಲ್ಲಾದರೂ ಸೇರಿ ಅವರ ಆಟಕ್ಕೆ ತಕ್ಕ ಪ್ರತಿಫಲ ದೊರಕಲಿ. ಅಲ್ಲಿಯಾದರೂ ಅವರ ಪ್ರಯತ್ನಕ್ಕೆ ಕಪ್ ಸಿಗುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.