ಗದಗ:- ಬಿಸಿಲಿನ ತಾಪಕ್ಕೆ ಮೂಕ ಪ್ರಾಣಿಗಳ ಗೋಳಾಟ ದೇವರಿಗೆ ಪ್ರೀತಿ ಎಂಬಂತಾಗಿದೆ. ಬೆಂಕಿ ಬಿಸಿಲಿನ ತಾಪಕ್ಕೆ ಆಹಾರ ಇಲ್ಲದೇ ಪ್ರಾಣಿ, ಪಕ್ಷಿಗಳು ವಿಲವಿಲ ಅಂತಿವೆ. ಮಂಗವೊಂದು ಆಹಾರಕ್ಕಾಗಿ ಒದ್ದಾಡುತ್ತಿದೆ.
ಮಂಗನ ನರಳಾಟ ನೋಡಿದರೆ ಮನಕಲುವಂತಿದೆ. ಪಕ್ಷಿಗಳು, ಜಾನುವಾರಗಳು ದಾಹ ನೀಗಿಸಿಕೊಳ್ಳಲು ನೀರು ಹುಡುಕಿಕೊಂಡು ಬರುವ ಸನ್ನಿವೇಶ ಮನಕಲಕುವಂತಿದೆ.
ಸೂರ್ಯನ ಪ್ರತಾಪಕ್ಕೆ ಮಾನವ ಕುಲವೇ ತತ್ತರಿಸಿ ಹೋಗಿದೆ. ಉರಿ ಬಿಸಿಲಿಗೆ ನೀರು ನೀರು ಎನ್ನುವಂತಾಗಿದೆ. ಆದರೆ ಮೂಕ ಪ್ರಾಣಿಗಳ ಸ್ಥಿತಿ ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ