ಕೋಲಾರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಷ್ಟಾನಕ್ಕೆ ತಂದಿರುವ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಹಿಂತೆಗೆದುಕೊಂಡಿದೆ ಶಾಲಾ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಹಿಂಪಡೆದಿದೆ ಎಂದು ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಅವ್ರು ಆರೋಪಿಸಿದರು.
ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಕಾಗೋಷ್ಟಿ ನಡೆಸಿ ಮಾತನಾಡಿದರು, ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತಂದಂತಹ ಯೋಜನೆಗಳನ್ನು ಗ್ಯಾರೆಂಟಿಗಳಿಗೆ ಬಳಸಿಕೊಂಡಿದೆ .ಸಿದ್ದರಾಮಯ್ಯ ಸರ್ಕಾರವು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ತೀವ್ರ ಬರ ಪರಿಸ್ಥಿತಿ ನಡುವೆಯು ರೈತರ ನೆರವಿಗೆ ದಾವಿಸುತ್ತಿಲ್ಲ ಎಂದು ತಿಳಿಸಿದ್ರು. ಕರ್ನಾಟಕದಲ್ಲಿ ತೀವ್ರ ಬರಗಾಲ ಎದುರಾಗಿದ್ದು ಕುಡಿಯುವ ನೀರಿನ ಸಮಸ್ಯೆಯಾಗಿದೆ. ಜನರು ಕಂಗಾಲಾಗಿದ್ದಾರೆ. ಅವರ ನೆರವಿಗೆ ಧಾವಿಸದೆ ವಿನಾಕಾರಣ ಕಾಂಗ್ರೆಸ್ನವರು ಕೇಂದ್ರ ಸರ್ಕಾರದ ವಿರುದ್ದ ಮಾತನಾಡುತ್ತಿದ್ದಾರೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಪಾಲು ಬಿಡುಗಡೆಯಾಗಿದೆ. ಆ ಹಣವನ್ನು ಯಾವುದಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದರು.
5 ಗ್ಯಾಂರೆಂಟಿ ಯೋಜನೆಗಳನ್ನು ಕಾಂಗ್ರೆಸ್ನವರು ಘೋಷಿಸಿದರು. ಇದಕ್ಕೆ ಹಣ ಎಲ್ಲಿಂದ ತರಲಾಗುತ್ತದೆ ಎಂದು ಪ್ರಶ್ನಿಸಿದಾಗ ಉತ್ತರ ನೀಡಲಿಲ್ಲ. ಆದರೆ ಈಗ ಜನರ ಕಲ್ಯಾಣಕ್ಕಾಗಿ ಜಾರಿಗೆ ತರಲಾಗಿದ್ದ ಯೋಜನೆಗಳನ್ನು ಕಡಿತಗೊಳಿಸಿ ಜನರನ್ನು ವಂಚಿಸುತ್ತಿದ್ದಾರೆ ಎಂದು ತಿಳಿಸಿದ್ರು. ಇದೇ ಸಂದರ್ಭದಲ್ಲಿ
ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಆನಂದ್.
ಬಿಜೆಪಿ ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಅಪ್ಪಿರಾಜು, ಲೋಕಸಭೆ ಕ್ಷೇತ್ರದ ಸಂಚಾಲ ಮಾಗೇರಿ ನಾರಾಯಣಸ್ವಾಮಿ, ಮಾದ್ಯಮ ಪ್ರಮುಖ್ ಪ್ರವಿಣ್ ಗೌಡ, ಸಹ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ,ಮುಖಂಡರಾದ ರಾಜೇಶ್ ಸಿಂಗ್, ಸಿ.ಡಿ.ರಾಮಚಂದ್ರ, ಪಾರ್ಥ ಸಾರತಿ, ರೋಣೂರು ಚಂದ್ರಶೇಖರ್, ಲಕ್ಷ$್ಮಣ್ ಗೌಡ ಹಾಜರಿದ್ದರು.