ಇನ್ನೂ ತಡಬೇಡ ವಿಲ್ ಜ್ಯಾಕ್ಸ್ಗೆ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಆರ್ಸಿಬಿಗೆ ಸನ್ರೈಸರ್ಸ್ ಹೈದರಬಾದ್ ಮಾಜಿ ಕೋಚ್ ಟಾಮ್ ಮೂಡಿ ಸಲಹೆ ಕೊಟ್ಟಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಆರ್ಸಿಬಿ ಸೋಲು ಅನುಭವಿಸಿತ್ತು. ಆ ಮೂಲಕ ಇಲ್ಲಿಯವರೆಗೂ ಆಡಿದ ಐದು ಪಂದ್ಯಗಳ ಪೈಕಿ ಆರ್ಸಿಬಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.
RCB ಸೋತಿದ್ದು ಅಪ್ಪು ಪತ್ನಿಯಿಂದ ಎಂಬ ಪೋಸ್ಟ್- ಗೃಹ ಸಚಿವರ ರಿಯಾಕ್ಷನ್ ಹೀಗಿತ್ತು !
ಪ್ರಸಕ್ತ ಟೂರ್ನಿಯಲ್ಲಿ ಆರ್ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್ 109 ರನ್, ಗ್ಲೆನ್ ಮ್ಯಾಕ್ಸ್ವೆಲ್ 32 ರನ್ ಹಾಗೂ ಕ್ಯಾಮೆರಾನ್ ಗ್ರೀನ್ 68 ರನ್ಗಳನ್ನು ಮಾತ್ರ ಗಳಿಸಿದ್ದಾರೆ. ಮತ್ತೊಂದೆಡೆ ಬೆಂಚ್ ಕಾಯುತ್ತಿರುವ ವಿಲ್ ಜ್ಯಾಕ್ಸ್ ಅವರ ಪವರ್ಪ್ಲೇ ಸ್ಟ್ರೈಕ್ ರೇಟ್ 164.21 ಇದೆ. ಇನ್ನು ಮಧ್ಯಮ ಓವರ್ಗಳಲ್ಲಿ ಇವರ ಸ್ಟ್ರೈಕ್ ರೇಟ್ 146 ಇದೆ.
ಇಎಸ್ಪಿಎನ್ ಕ್ರಿಕ್ಇನ್ಪೋ ಜೊತೆ ಮಾತನಾಡಿದ ಟಾಮ್ ಮೂಡಿ, “ಆರ್ಸಿಬಿ ವಿಲ್ ಜ್ಯಾಕ್ಸ್ ಅವರನ್ನು ಗಂಭೀರವಾಗಿ ಪರಿಗಣಿಸಬೇಕು. ಅವರನ್ನು ಆಡಿಸುವ ಬಗ್ಗೆ ಖಂಡಿತವಾಗಿಯೂ ಟೀಮ್ ಮ್ಯಾನೇಜ್ಮೆಂಟ್ ಚರ್ಚೆ ನಡೆಸಬೇಕು. ಫಾಫ್ ಡು ಪ್ಲೆಸಿಸ್ ಸ್ಥಾನದಲ್ಲಿ ಇವರು ಆಡುತ್ತಾರೆಂದು ನಾನು ಭಾವಿಸುವುದಿಲ್ಲ. ಗ್ಲೆನ್ ಮ್ಯಾಕ್ಸ್ವೆಲ್ ಅಥವಾ ಕ್ಯಾಮೆರಾನ್ ಗ್ರೀನ್ ಅವರು ಒತ್ತಡದಲ್ಲಿದ್ದಾರೆಂದು ನಾನು ಭಾವಿಸುತ್ತೇನೆ. ಇವರಿಬ್ಬರಲ್ಲಿ ಒಬ್ಬರ ಸ್ಥಾನಕ್ಕೆ ಜ್ಯಾಕ್ಸ್ ಬರಬೇಕು,” ಎಂದು ಹೇಳಿದ್ದಾರೆ.
ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ಕಾಮಿಲ್ಲಾ ವಿಕ್ಟೋರಿಯನ್ಸ್ ಪರ ವಿಲ್ ಜ್ಯಾಕ್ಸ್, ಚಟ್ಟೋಗ್ರಾಮ್ ಚಾಲೆಂಜರ್ಸ್ ವಿರುದ್ಧ ಕೇವಲ 53 ಎಸೆತಗಳಲ್ಲಿ 108 ರನ್ಗಳನ್ನು ಸಿಡಿಸಿದ್ದರು. ಆ ಮೂಲಕ ವಿಕ್ಟೋರಿಯನ್ಸ್ ತಂಡ 239 ರನ್ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ಆದರೆ, ಆರ್ಸಿಬಿ ಪ್ಲೇಯಿಂಗ್ XIನಲ್ಲಿ ಯಾರ ಸ್ಥಾನದಲ್ಲಿ ವಿಲ್ ಜ್ಯಾಕ್ಸ್ ಆಡಲಿದ್ದಾರೆಂಬುದು ಪ್ರಶ್ನೆಯಾಗಿದೆ.