ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಗೋಮಾಂಸ ತಿನ್ನುತ್ತಾರೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್ ಆರೋಪಕ್ಕೆ ನಟಿ ಕಂಗನಾ ತಿರುಗೇಟು ನೀಡಿದ್ದಾರೆ.
ನಾನು ಗೋಮಾಂಸ ಅಥವಾ ಇತರ ಯಾವುದೇ ರೀತಿಯ ಮಾಂಸವನ್ನು ಸೇವಿಸುವುದಿಲ್ಲ. ನನ್ನ ಬಗ್ಗೆ ಸಂಪೂರ್ಣವಾಗಿ ಆಧಾರ ರಹಿತ ವದಂತಿಗಳನ್ನು ಹರಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಾನು ಯೋಗ ಮತ್ತು ಆಯುರ್ವೇದವನ್ನು ಪ್ರತಿಪಾದಿಸುತ್ತಿದ್ದೇನೆ ಮತ್ತು ಪ್ರಚಾರ ಮಾಡುತ್ತಿದ್ದೇನೆ ಎಂದಿದ್ದಾರೆ.
ವಿರೋಧಿಗಳ ಬಗ್ಗೆಯೂ ಕಟುವಾಗಿಯೇ ಮಾತನಾಡಿರುವ ಕಂಗನಾ, ಇಂತಹ ತಂತ್ರಗಳು ನನ್ನ ಇಮೇಜ್ ಹಾಳುಮಾಡಲು ಕೆಲಸ ಮಾಡುವುದಿಲ್ಲ. ನನ್ನ ಜನರು ನನ್ನ ಬಗ್ಗೆ ತಿಳಿದಿದ್ದಾರೆ ಮತ್ತು ನಾನು ಹೆಮ್ಮೆಯ ಹಿಂದೂ ಎಂದು ಅವರಿಗೆ ತಿಳಿದಿದೆ. ಯಾವುದೇ ಪ್ರಯತ್ನ ಅವರನ್ನು ದಾರಿ ತಪ್ಪಿಸುವುದಿಲ್ಲ ಜೈ ಶ್ರೀ ರಾಮ್ ಎಂದು ಬರೆದುಕೊಂಡಿದ್ದಾರೆ.