ವಿರಾಟ್ ಕೊಹ್ಲಿಯ ಅಭಿಮಾನಿಗಳಿಗೆ ಲೆಕ್ಕವೇ ಇಲ್ಲ… ಜಾಗತಿಕವಾಗಿ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗರಲ್ಲಿ ಒಬ್ಬರು. ಅವರ ಅಸಾಧಾರಣ ಪ್ರತಿಭೆ, ದೃಢತೆ ಮತ್ತು ವರ್ಚಸ್ವಿ ವ್ಯಕ್ತಿತ್ವದಿಂದ ಕೊಹ್ಲಿ ಅಪಾರ ಅಭಿಮಾನಿಗಳನ್ನು ಸಂಗ್ರಹಿಸಿದ್ದಾರೆ. ಆರ್ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ಜೈಪುರದ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ಮುಖಾಮುಖಿಯಾಗಿದ್ದರು.
A fan breached the field to meet & hug Virat Kohli. pic.twitter.com/HTxu1vDlLr
— Mufaddal Vohra (@mufaddal_vohra) April 6, 2024
ಆರ್ಸಿಬಿ ತಂಡದ ಬ್ಯಾಟಿಂಗ್ ಪ್ರದರ್ಶನದ ವೇಳೆ ಕೊಹ್ಲಿಯನ್ನು ಕಂಡ ಅಭಿಮಾನಿ ಮೈದಾನದತ್ತ ನುಗ್ಗಿದ್ದಲ್ಲದೆ, ಕೊಹ್ಲಿಯನ್ನು ಓಡಿ ಬಂದು ಅಪ್ಪಿಕೊಂಡಿದ್ದಾನೆ. ಯುವಕನು ಆರ್ಸಿಬಿ ಟೀ ಶರ್ಟ್ ಧರಿಸಿದ್ದನು. ಕೂಡಲೇ ಆತನನ್ನು ಭದ್ರತಾ ಸಿಬ್ಬಂದಿ ಹಿಡಿದು ಮೈದಾನದಿಂದ ಹೊರಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ.ಆಗ, ಆತನಿಗೆ ಏನೂ ಮಾಡಬೇಡಿ ಎಂದು ಕೊಹ್ಲಿ ಸಿಬ್ಬಂದಿಗೆ ಹೇಳ್ತಾರೆ.
A fan entered into the ground to hug Virat Kohli 🫂#ViratKohli #Jaipur #RCBvsRR #RRvRCB #RRvsRCB pic.twitter.com/TcG1V9ADrU
— BANSI ,بنشی (@ImBansi07) April 6, 2024
ಮೈದಾನದ ಸ್ಟಾಫ್ಗೆ ಕೊಹ್ಲಿ ಸಲಹೆ ನೀಡುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ಪ್ರವೇಶಿಸಿ ವಿರಾಟ್ ಭೇಟಿಯಾಗಿದ್ದ. ಆದರೆ, ಆತನನ್ನು ಹೊರಕ್ಕೆ ಕರೆದುಕೊಂಡು ಹೋಗಿದ್ದ ಸಿಬ್ಬಂದಿ ಕಾಲಿಂದ ಒದ್ದು ಥಳಿಸಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೆ ನೆಟ್ಟಿಗರು ಕೂಡಾ ಸಿಬ್ಬಂದಿ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.