ಒಬ್ಬನೇ ಒಬ್ಬ ವಿಕೆಟ್ ಪಡೆಯುವ ಬೌಲರ್ ಇಲ್ಲದ ಮೇಲೆ RCB ಗೆಲ್ಲಲು ಹೇಗೆ ಸಾಧ್ಯ ಎಂದು ಮಾಜಿ ಕ್ರಿಕೆಟಿಗ ಸೆಹ್ವಾಗ್ ಹೇಳಿದ್ದಾರೆ.
RR ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಇನ್ನೂ 20 ರನ್ ಹೆಚ್ಚುವರಿ ಗಳಿಸಬೇಕಿತ್ತು. ವಿರಾಟ್ ಕೊಹ್ಲಿ ಇನ್ನಿಂಗ್ಸ್ ಚೆನ್ನಾಗಿತ್ತು. ಆದ್ರೆ ಅವರೊಂದಿಗೆ ಸಾಥ್ ನೀಡಬೇಕಿದ್ದ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಸರಿಯಾಗಿ ಬ್ಯಾಟಿಂಗ್ ಮಾಡಲಿಲ್ಲ. ಮಹಿಪಾಲ್ ಲೊಮ್ರೋರ್ ಸಹ ತಂಡದಲ್ಲಿ ಇಲ್ಲದೇ ಇದ್ದದ್ದು ದೊಡ್ಡ ನಷ್ಟವಾಯಿತು. ವಿರಾಟ್ ಕೊಹ್ಲಿ 39 ಬಾಲ್ಗೆ 50 ರನ್ ಗಳಿಸಿದಾಗ, ಅವರ ಸ್ಟ್ರೈಕ್ ರೇಟ್ 200ರ ಗಡಿ ದಾಟಬೇಕಿತ್ತು. ಆದ್ರೆ ಇತರ ಬ್ಯಾಟರ್ಗಳು ಸಾಥ್ ನೀಡದ ಪರಿಣಾಮ ಸಂಪೂರ್ಣ ಒತ್ತಡ ಕೊಹ್ಲಿ ಮೇಲೆ ಇತ್ತು ಎಂದು ಹೇಳಿದ್ದಾರೆ.
ಕೋಲಾರ: ನಂಗಲಿ ಚೆಕ್ಪೋಸ್ಟ್ನಲ್ಲಿ ಬೃಹತ್ ಮಟ್ಟದ ಸ್ಪೋಟಕಗಳು ಪತ್ತೆ !
ಕೊಹ್ಲಿ ಒಳ್ಳೆ ಫಾರ್ಮ್ನಲ್ಲಿದ್ದಾರೆ, ಕೊನೇವರೆಗೂ ಕ್ರೀಸ್ನಲ್ಲಿ ಉಳಿಯೋದು ಅವರ ಪಾತ್ರ. ಆದ್ರೆ ಅಷ್ಟೊಂದು ಹಣಕ್ಕೆ ಆಯ್ಕೆಯಾದ ಇತರ ಬ್ಯಾಟರ್ಗಳು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕು. ಮ್ಯಾಕ್ಸ್ವೆಲ್ ತರ ಆದ್ರೆ ಯಾರು ಏನ್ ಮಾಡೋದಕ್ಕೆ ಆಗುತ್ತೆ ಎಂದು ಬೇಸರ ಹೊರಹಾಕಿದ್ದಾರೆ
ಇಬ್ಬರು ಬ್ಯಾಟರ್ಗಳು (ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್) 170+ ಸ್ಟ್ರೈಕ್ ರೇಟ್ನೊಂದಿಗೆ ಆಡುತ್ತಿದ್ದಾರೆ. ಇನ್ನೊಂದು ತುದಿಯಲ್ಲಿ ಒಬ್ಬನೇ ಒಬ್ಬ ವಿಕೆಟ್ ಪಡೆಯುವ ಬೌಲರ್ ಇಲ್ಲ. ಆರ್ಸಿಬಿ ಬೌಲರ್ಗಳ ಮೊರೆ ಹೋಗಲಿಲ್ಲ. ಹೀಗಿರುವಾಗ ನೀವು ಹೇಗೆ ಗೆಲ್ಲುತ್ತೀರಿ? ಎಂದು ತಿವಿದಿದ್ದಾರೆ.