ನಟ ಧ್ರುವ ಸರ್ಜಾ ದಂಪತಿ ಮಕ್ಕಳಿಗೆ ಪಂಚಮುಡಿ ಶಾಸ್ತ್ರ ಮಾಡಿಸಲು ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಮನೆದೇವರಿಗೆ ಮಕ್ಕಳ ಮೊದಲ ಮುಡಿ ಕೊಡುವ ಶಾಸ್ತ್ರ ಮಾಡಿದ್ದಾರೆ ಧ್ರುವ ಸರ್ಜಾ ದಂಪತಿ. ರುದ್ರಾಕ್ಷಿ ಹಾಗೂ ಹಯಗ್ರೀವನ ಪಂಚಮುಡಿ ಶಾಸ್ತ್ರ ಮಾಡಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಧ್ರುವ ಸರ್ಜಾ ಕಳೆದ ಜನವರಿಯಲ್ಲಿ ತಮ್ಮಿಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದರು. ಪುತ್ರಿಗೆ ರುದ್ರಾಕ್ಷಿ ಪುತ್ರನಿಗೆ ಹಯಗ್ರೀವ ಎಂದು ಹೆಸರಿಟ್ಟಿದ್ದರು. ಇದೀಗ ಇಬ್ಬರೂ ಮಕ್ಕಳಿಗೆ ಒಟ್ಟಿಗೆ ಮುಡಿ ಕೊಡಿಸಿದ್ದಾರೆ.
ನಂಜನಗೂಡು ಶ್ರೀಕಂಠೇಶ್ವರ ಧ್ರುವ ಸರ್ಜಾರ ಮನೆ ದೇವರು. ಹೀಗಾಗಿ ಮಕ್ಕಳ ಪ್ರಥಮ ಮುಡಿ ಮನೆದೇವರಿಗೆ ಅರ್ಪಿಸಿದ್ದಾರೆ. ರುದ್ರಾಕ್ಷಿ ಹಯಗ್ರೀವನಿಗೆ ಒಟ್ಟಿಗೆ ಮುಡಿ ಕೊಡುವ ಶಾಸ್ತ್ರ ಮಾಡಿಸಿದ್ದಾರೆ. ಈ ವೇಳೆ ಧ್ರುವ ಸರ್ಜಾರನ್ನು ನೋಡಲು ಸಾಕಷ್ಟು ಮಂದಿ ಆಗಮಿಸಿದ್ದರು.