ಯಾದಗಿರಿ:- ಸಿಎಂ ಸ್ಥಾನದಿಂದ ಸಿದ್ದು ಇಳಿಸಿದರೆ ಸರ್ಕಾರ ಉಳಿಯಲ್ಲ ಎಂದು ರಾಜುಗೌಡ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸಿದ್ದರಾಮಯ್ಯ ಧಮ್ನಿಂದಲೇ ಗೆದ್ದಿದ್ದಾರೆ. ಕಾಂಗ್ರೆಸ್ಗೆ ಇಷ್ಟು ಸೀಟು ಬಂದಿವೆ. ಸಿದ್ದರಾಮಯ್ಯ ಸಾಹೇಬರನ್ನ ಇಳಿಸಿದರೆ ಸರ್ಕಾರ ಉಳಿಯಲ್ಲ. ಗೃಹಲಕ್ಷ್ಮೀ ಹಣ 3 ತಿಂಗಳಿಗೋ 6 ತಿಂಗಳಿಗೋ ಬರುತ್ತೆ. ನಾನು ಗೆದ್ರೆ ಸಿಎಂ ಸಾಹೇಬರ ಬಳಿ ಮಾತಾಡಿ ಹಾಕಿಸ್ತೇನೆ. ಕಾಂಗ್ರೆಸ್ನವರು ಗೆದ್ರೆ ಸಿದ್ದರಾಮಯ್ಯರ ಮುಂದೆ ಮಾತಾಡಲ್ಲ. ಸಿದ್ದರಾಮಯ್ಯನವರು ಹೇ ಅಂದ್ರೆ ಅವರು ಸುಮ್ಮನಾಗುತ್ತಾರೆ. ನಾನಾದರೆ ಅಣ್ಣಾ ಅಂತ ಹೇಳಿ ಕೆಲಸವನ್ನು ಮಾಡಿಸುತ್ತೇನೆ ಎಂದರು.