ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಇ-ಶ್ರಮ ಯೋಜನೆ ಜಾರಿಗೆ ತಂದಿದೆ. ಇ-ಶ್ರಮ ಕಾರ್ಡ್ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರಗಳ ಕಲ್ಯಾಣ ಯೋಜನೆಗಳನ್ನು ತಲುಪಿಸಿ, ಸಾಮಾಜಿಕ ಭದ್ರತೆ ಕಲ್ಪಿಸಲಾಗುತ್ತಿದೆ. ರಾಜ್ಯದಲ್ಲೂ ಇ-ಶ್ರಮ ಕಾರ್ಡ್ ನೀಡಲಾಗುತ್ತಿದ್ದು, ಯೋಜನೆಯ ವಸ್ತುಸ್ಥಿತಿಯ ಕುರಿತು ಸಮಗ್ರ ವರದಿ ಇಲ್ಲಿದೆ.
ಇ-ಶ್ರಮ ಕಾರ್ಡ್ ಎಂಬುದು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟೀಯ ದತ್ತಾಂಶವಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಯೋಜನೆ ಅಸಂಘಟಿತ ವಲಯದ ಕಾರ್ಮಿಕರ ಶ್ರೇಯೋಭಿವೃದ್ಧಿ ಮೂಲ ಉದ್ದೇಶ ಹೊಂದಿದೆ. ಇ-ಶ್ರಮ್ ಕಾರ್ಡ್ ಅಸಂಘಟಿತ ವಲಯದ ಕಾರ್ಮಿಕರಿಗೆ ವಿವಿಧ ಪ್ರಯೋಜನಗಳನ್ನು ಒದಗಿಸಲು ಭಾರತ ಸರ್ಕಾರ ಪ್ರಾರಂಭಿಸಿದ ಡಿಜಿಟಲ್ ವೇದಿಕೆಯಾಗಿದೆ.
ದೇಶದ ಎಲ್ಲಾ ಕಾರ್ಮಿಕರಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು e-SHRAM ಹೆಸರಿನ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಪೋರ್ಟಲ್ ವಿಶೇಷವಾಗಿ ಕಾರ್ಮಿಕರಿಗೆ, ಶ್ರಮದ ಕೆಲಸ ನಿರ್ವಹಿಸುವ ಕೆಲಸಗಾರರಿಗೆ ಎಂದೇ ಹಲವು ಸೌಲಭ್ಯಗಳನ್ನು ಒದಗಿಸಲಿದೆ.
ಕಾರ್ಮಿಕರು ಇ-ಶ್ರಾಮ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ವಿಶಿಷ್ಟ ಗುರುತಿನ ಸಂಖ್ಯೆ (ಯುಎಎನ್) ಕಾರ್ಡ್ ಪಡೆಯಬಹುದು. ಈ ಸಂಖ್ಯೆಯ ಮೂಲಕ ಉದ್ಯೋಗ ಕಳೆದುಕೊಂಡಲ್ಲಿ ಹೊಸ ಉದ್ಯೋಗ ಹುಡುಕಬಹುದು. ಈಗ ನೀವು e – SHRAM ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವುದು ಹೇಗೆ? ಇದರಿಂದ ಏನೆಲ್ಲ ಸೌಲಭ್ಯಗಳು ದೊರೆಯುತ್ತವೆ ಎಂಬುದನ್ನು ತಿಳಿದುಕೊಳ್ಳಿ.
ಈ ಪೋರ್ಟಲ್ನ ಮುಖ್ಯ ಉದ್ದೇಶವೆಂದರೆ ಪ್ರತಿದಿನ ಅಥವಾ ಮಾಸಿಕ ಆಧಾರದ ಮೇಲೆ ಕೆಲಸ ಮಾಡುವ ಎಲ್ಲಾ ಕಾರ್ಮಿಕರಿಂದ ಡೇಟಾವನ್ನು ಸಂಗ್ರಹಿಸುವುದು. ಕಾರ್ಮಿಕರು ವೈಯಕ್ತಿಕ ವಿವರಗಳನ್ನು ಒದಗಿಸುವ ಮೂಲಕ ಇ-ಶ್ರಾಮ್ ಪೋರ್ಟಲ್ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು.
ಆನ್ಲೈನ್ ಮೂಲಕ ಈ ಶ್ರಮ ಕಾರ್ಡ್ ಗಾಗಿ ಅಪ್ಲೈ ಮಾಡಬಹುದು. ಕಾರ್ಮಿಕರು ತಮ್ಮ ಬಳಿ ಈ ಶ್ರಮ ಕಾರ್ಡ್ ಹೊಂದಿದ್ದರೆ ಸರ್ಕಾರದ ಹಲವಾರು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು. ಇದರಲ್ಲಿ ಪಿಂಚಣಿ ವ್ಯವಸ್ಥೆ ಕೂಡ ಲಭ್ಯವಿದ್ದು ತಿಂಗಳಿಗೆ ಸಾವಿರದಿಂದ 3000 ವರೆಗೆ ಪಿಂಚಣಿ ಪಡೆಯಬಹುದು.
ಇ–ಶ್ರಾಮ್ ಪೋರ್ಟಲ್ ಆನ್ಲೈನ್ ನೋಂದಣಿಯ ಪ್ರಯೋಜನಗಳು
ನೋಂದಾಯಿಸಿಕೊಂಡ ಕಾರ್ಮಿಕರು ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೆ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಪರಿಹಾರವನ್ನಾಗಿ ನೀಡಲಾಗುತ್ತದೆ.
ಆಕಸ್ಮಿಕ ಮರಣದಿಂದ ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ಒದಗಿಸಲಾಗುತ್ತದೆ.
ನೋಂದಣಿಯ ನಂತರ, ನಿಮಗೆ ಒಂದು ವರ್ಷದವರೆಗೆ ಪ್ರೀಮಿಯಂ ಒದಗಿಸಲಾಗುತ್ತದೆ.
ಇ-ಶರ್ಮ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ, ನೀವು ಸಾಮಾಜಿಕ ಭದ್ರತಾ ಯೋಜನೆಯ ಲಾಭವನ್ನು ಪಡೆಯುತ್ತೀರಿ.
ಈ ಪೋರ್ಟಲ್ ಮೂಲಕ ನಿಮಗೆ ವಿಮಾ ಯೋಜನೆಯ ವಿಮಾ ರಕ್ಷಣೆಯನ್ನು ಸಹ ನೀಡಲಾಗುವುದು.
ಇದರ ಮೂಲಕ, ನೀವು ವಲಸೆ ಕಾರ್ಮಿಕರ ತಂಡವನ್ನು ಸಹ ಟ್ರ್ಯಾಕ್ ಮಾಡಬಹುದು. ಈ ಮೂಲಕ ನಿಮಗೆ ಆರ್ಥಿಕ ಸಹಾಯವನ್ನೂ ನೀಡಲಾಗುವುದು.
ಉದ್ಯೋಗ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಲ್ಲಿದೆ
e-Shram @register.eshram.gov.in ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
ಮುಖಪುಟದ ವಿವರಗಳನ್ನು ಪರಿಶೀಲಿಸಿ ಮತ್ತು ಸ್ವಯಂ ನೋಂದಣಿಗೆ ಹೋಗಿ.
ನಿಮ್ಮ ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
EPFO ಮತ್ತು ESIC ಗಾಗಿ ಹೌದು/ಇಲ್ಲ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
Send OTP ಬಟನ್ ಮೇಲೆ ಕ್ಲಿಕ್ ಮಾಡಿ.
ಅರ್ಜಿ ನಮೂನೆಯನ್ನು ತೆರೆಯಿರಿ ಮತ್ತು ವಿವರಗಳನ್ನು ಭರ್ತಿ ಮಾಡಿ.
ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಳ್ಳಿ.
e – SHRAM ಪೋರ್ಟಲ್ ಆನ್ಲೈನ್ನಲ್ಲಿ ಅನ್ವಯಿಸಲು ಅಗತ್ಯವಿರುವ ದಾಖಲೆಗಳು
ಹೆಸರು, ವಿಳಾಸ ಪುರಾವೆ, ವೃತ್ತಿ, ಶೈಕ್ಷಣಿಕ ಅರ್ಹತೆ, ಕುಟುಂಬದ ವಿವರಗಳು, ಆಧಾರ್ ಕಾರ್ಡ್, ಕೌಶಲ್ಯ ವಿವರಣೆ, ವಿದ್ಯುತ್ ಬಿಲ್, ಜನನ ಪ್ರಮಾಣಪತ್ರ, ಪಡಿತರ ಪತ್ರಿಕೆ, ಬ್ಯಾಂಕ್ ಪಾಸ್ಬುಕ್, ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ- ಇಷ್ಟು ದಾಖಲೆಗಳು ಅಗತ್ಯವಿದೆ.
eSHRAM ಕಾರ್ಡ್ಗಾಗಿ ಆನ್ಲೈನ್ನಲ್ಲಿ ಯಾರೆಲ್ಲ ನೋಂದಾಯಿಸಿಕೊಳ್ಳಬಹುದು?
ಲೇಬಲಿಂಗ್ ಮತ್ತು ಪ್ಯಾಕಿಂಗ್ ಕಾರ್ಮಿಕರು, ಇಟ್ಟಿಗೆ ಗೂಡು ಕೆಲಸಗಾರರು, ವಲಸೆ ಕಾರ್ಮಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಕಾರ್ಪೆಂಟರ್ ರೇಷ್ಮೆ ಕೃಷಿ ಕಾರ್ಮಿಕರು, ಮನೆಗೆಲಸದ ಕಾರ್ಮಿಕರು, ಕೃಷಿ ಕೆಲಸಗಾರರು,, ಸಣ್ಣ ಮತ್ತು ಅತಿ ಸಣ್ಣ ರೈತರು, ಆಶಾ ಕಾರ್ಯಕರ್ತೆಯರು, ಬೀದಿ ಬದಿಯ ವ್ಯಾಪಾರಿಗಳು, ಹಾಲು ಉತ್ಪಾದಕ ರೈತರು, ರೇಷ್ಮೆ ಉತ್ಪಾದನಾ ಕೆಲಸಗಾರರು, ಆಟೋ ಚಾಲಕರು, ನೋಂದಾಯಿಸಿಕೊಳ್ಳಬಹುದು.
ಜೊತೆಗೆ ಪತ್ರಿಕೆ ಮಾರಾಟಗಾರರು, ಕ್ಷೌರಿಕರು, ಮೀನುಗಾರರು, ಸಾ ಮಿಲ್ ಕಾರ್ಮಿಕರು, ಟ್ಯಾನರಿ ಕೆಲಸಗಾರರು, ಪಶುಪಾಲನಾ ಕೆಲಸಗಾರರು, ಟ್ಯಾನರ್, ಕಟ್ಟಡ ಮತ್ತು ನಿರ್ಮಾಣ ಕೆಲಸಗಾರರು, ಗೃಹ ಕಾರ್ಮಿಕರು ಸೇರಿದಂತೆ ಒಟ್ಟು 150ಕ್ಕಿಂತ ಹೆಚ್ಚು ಬಗೆಯ ಕಾರ್ಮಿಕರು ಕರ್ನಾಟಕದಲ್ಲಿ ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬಹುದು.