ಶಿವಮೊಗ್ಗ:- ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ದ ಪ್ರಕರಣ ದಾಖಲಾಗಿದೆ.
ಚುನಾವಣಾಧಿಕಾರಿಗಳ ಕಚೇರಿಯಿಂದ ಯಾವುದೇ ರೀತಿಯ ಅನುಮತಿ ಪಡೆಯದೆ ರಾಜಕೀಯ ಸಭೆ ನಡೆಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪದಡಿ ಈ ಪ್ರಕರಣ ದಾಖಲಾಗಿದೆ.
IPL 2024: ಅಗ್ರಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ – RCB ಗೆ ಸೋಲು, ಸೋಲು, ಸೋಲು!
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ನೊಣಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಬುತೀರ್ಥದ ದೇವಸ್ಥಾನ ಒಂದರಲ್ಲಿ ಶನಿವಾರ ಪೂಜಾ ಕಾರ್ಯಕ್ರಮ ನೆರವೇರಿಸಿ, ಅಲ್ಲೇ ಹತ್ತಿರದಲ್ಲಿದ್ದ ಅರ್ಚಕರ ಮನೆಗೆ ಹೋಗಿದ್ದಾರೆ. ಅವರ ಮನೆಯ ಅಂಗಳದಲ್ಲಿ ಸುಮಾರು 50 ರಿಂದ 60 ಜನರನ್ನು ಸೇರಿಸಿಕೊಂಡು 50 ಕುರ್ಚಿಗಳು ಹಾಗೂ ಹ್ಯಾಂಡ್ ಮೈಕ್ ಒಳಗೊಂಡಂತೆ ಸಣ್ಣ ವೇದಿಕೆ ರೀತಿಯಲ್ಲಿ ಸಭೆ ನಡೆಸಿ ರಾಜಕೀಯ ಪ್ರೇರಿತ ಭಾಷಣವನ್ನು ಮಾಡಿದ್ದಾರೆ.
ಈ ಕಾರ್ಯಕ್ರಮ ನಡೆಸಲುಈಶ್ವರಪ್ಪ ಅವರು ಚುನಾವಣಾಧಿಕಾರಿಗಳ ಕಚೇರಿಯಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆದಿರುವುದಿಲ್ಲ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಸಂಜ್ಞೆಯ ಅಪರಾಧ ಪ್ರಕರಣವಾದ್ದರಿಂದ ನ್ಯಾಯಾಲಯದ ಅನುಮತಿ ಪಡೆದು ಕೆ.ಎಸ್ ಈಶ್ವರಪ್ಪ ರವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.