RR ವಿರುದ್ಧದ ಪಂದ್ಯದಲ್ಲಿ ಬಟ್ಲರ್ ಫಾರ್ಮ್ ಕಂಡುಕೊಳ್ಳಲು ಆರ್ಸಿಬಿ ವೇಗಿಗಳು ನೆರವಾಗಿದ್ದಾರೆ. ರಾಜಸ್ಥಾನ ತನ್ನ ತವರು ನೆಲದಲ್ಲಿ ಅಜೇಯ ಓಟವನ್ನು ಮುಂದುವರೆಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು. ತಂಡದ ಪರ ಶತಕ ಸಿಡಿಸಿ ಮಿಂಚಿದ ಕೊಹ್ಲಿ ಅಜೇಯ 113 ರನ್ ಬಾರಿಸಿದರು.
IPL 2024: ಕೊಹ್ಲಿ ಶತಕ ವ್ಯರ್ಥ, ರಾಜಸ್ಥಾನ ವಿರುದ್ಧ ಆರ್ಸಿಬಿಗೆ ಹೀನಾಯ ಸೋಲು
ಇನ್ನು ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಓವರ್ನ ಮೂರನೇ ಎಸೆತದಲ್ಲಿ ಶೂನ್ಯಕ್ಕೆ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಆರಂಭದಲ್ಲೇ ಆರ್ಸಿಬಿ ವಿಕೆಟ್ ಪಡೆದುಕೊಂಡಿದ್ದರಿಂದ ಈ ಪಂದ್ಯ ಆರ್ಸಿಬಿ ಪರ ವಾಲುತ್ತೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.
ಅದಕ್ಕೆ ಪೂರಕವಾಗಿ ಪವರ್ ಪ್ಲೇಯ ಮೊದಲ ಐದು ಓವರ್ಗಳಲ್ಲಿ ಆರ್ಸಿಬಿ ವೇಗಿಗಳು ರಾಜಸ್ಥಾನ್ ಬ್ಯಾಟರ್ಗಳನ್ನು ಕಟ್ಟಿಹಾಕಿದ್ದರು. ಆದರೆ 6ನೇ ಓವರ್ಲ್ಲಿ ಮಯಾಂಕ್ ದಾಗರ್ ಬೌಲ್ ಮಾಡಿದ ಓವರ್ ಪಂದ್ಯದ ಗತಿಯನ್ನೇ ಬದಲಿಸಿತು. ಈ ಓವರ್ನಲ್ಲಿ ಬರೋಬ್ಬರಿ 20 ರನ್ ಬಂತು.
ಇಲ್ಲಿಂದ ಲಯ ಕಂಡುಕೊಂಡ ಸಂಜು ಸ್ಯಾಮ್ಸನ್ ಹಾಗೂ ಜೋಶ್ ಬಟ್ಲರ್ ಆರ್ಸಿಬಿ ವೇಗಿಗಳ ಬೆವರಿಳಿಸಿದರು. ಅದರಲ್ಲೂ ಕಳೆದ ಮೂರು ಪಂದ್ಯಗಳಲ್ಲಿ ಒಂದಕ್ಕಿ ದಾಟಲು ಕಷ್ಟಪಡುತ್ತಿದ್ದ ಬಟ್ಲರ್ ಆರ್ಸಿಬಿ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು.
ಕಳೆದ ಮೂರು ಪಂದ್ಯಗಳಲ್ಲಿ ಬಟ್ಲರ್ ಕ್ರಮವಾಗಿ 11, 11, 13 ರನ್ ಬಾರಿಸಿದ್ದರು. ಆದರೆ ಆರ್ಸಿಬಿ ವಿರುದ್ಧ ತನ್ನ ಹಳೆಯ ಫಾರ್ಮ್ ಕಂಡುಕೊಂಡ ಬಟ್ಲರ್ ಸಿಕ್ಸರ್ ಹಾಗೂ ಬೌಂಡರಿಗಳ ಮಳೆಗರೆದರು.
ಅಂತಿಮವಾಗಿ ಆರಂಭಿಕರಾಗಿ ಕಣಕ್ಕಿಳಿದು ಕೊನೆಯವರೆಗೂ ಅಜೇಯರಾಗಿ ಉಳಿದ ಬಟ್ಲರ್ 20ನೇ ಓವರ್ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಕೂಡ ಪೂರ್ಣಗೊಳಿಸಿದರು. ಬಟ್ಲರ್ ತಮ್ಮ ಇನ್ನಿಂಗ್ಸ್ನಲ್ಲಿ 58 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರು.
ಇವರಲ್ಲದೆ ಜವಬ್ದಾರಿಯುತ ಇನ್ನಿಂಗ್ಸ್ ಆಡಿದ ನಾಯಕ ಸಂಜು ಸ್ಯಾಮ್ಸನ್ ಕೂಡ ಈ ಪಂದ್ಯದಲ್ಲಿ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 69 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು