ಕೆಲವೊಬ್ಬರು ರಾತ್ರಿ ಊಟ ಮಾಡಿದ ಬಳಿಕ ಬೇಗ ನಿದ್ದೆ ಬರಲು ವ್ಯಾಯಾಮ ಸೂಕ್ತ ಎಂದು ಭಾವಿಸುತ್ತಾರೆ.
ರಾತ್ರಿಯಾದ ಮೇಲೆ ವ್ಯಾಯಾಮ ಮಾಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ ಎನ್ನುವುದು ಕೆಲವರ ತಪ್ಪು ಕಲ್ಪನೆ. ವ್ಯಾಯಾಮದಿಂದ ದೇಹದಲ್ಲಿ ಡಿಹೈಡ್ರೇಶನ್ ಉಂಟಾಗುತ್ತದೆ. ಅಲ್ಲದೇ ಸ್ಟ್ರೆಸ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇಂಥ ಹಾರ್ಮೋನುಗಳು ಹಾಗೂ ಜಿಮ್ ನಲ್ಲಿರುವ ಬೆಳಕು ಮೆಲಟೋನಿನ್ ಅಂದರೆ ಸ್ಲೀಪ್ ಹಾರ್ಮೋನುಗಳ ಬಿಡುಗಡೆಯನ್ನು ತಡೆಯುತ್ತವೆ.
ಬಟಾಣಿಯನ್ನು ವಾರಕ್ಕೆರಡು ಸಲ ತಿನ್ನುತ್ತಾ ಬಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಹೀಗಾಗಿ ಮಲಗುವ 3 ಗಂಟೆ ಮುಂಚಿತವಾಗಿ ವ್ಯಾಯಾಮ ಮಾಡಬೇಕು. ಅಲ್ಲದೇ ಜಿಮ್ ನಿಂದ ಬಂದಾದ ಮೇಲೆ ಸ್ನಾನ ಮಾಡುವುದೂ ಸಹ ಒಳ್ಳೆಯ ಹವ್ಯಾಸವಾಗಿದೆ.
ವ್ಯಾಯಾಮ ಎನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದು ನಿಮ್ಮ ದಿನಚರಿ ಸರಿಯಾಗಿದ್ದಾಗ ಮಾತ್ರ.