ಬೇಸಿಗೆಯಲ್ಲಿ ಹೆಚ್ಚಿನವರು ಐಸ್ಕ್ರೀಮ್ ತಿನ್ನಲು ಇಷ್ಟಪಡುತ್ತಾರೆ. ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಪ್ರತಿಯೊಬ್ಬರೂ ಐಸ್ಕ್ರೀಮ್ನ್ನು ಇಷ್ಟಪಡುತ್ತಾರೆ. ಐಸ್ಕ್ರೀಮ್ ತಿನ್ನುವುದರಿಂದ ದೇಹವು ತಂಪಾಗಿರುತ್ತದೆ ಮತ್ತು ಶಾಖದಿಂದ ಪರಿಹಾರವನ್ನು ನೀಡುತ್ತದೆ ಎಂದು ಅವರು ನಂಬುತ್ತಾರೆ.
ಆದರೆ ನೀವು ಗಮನಿಸಿದ್ದೀರಾ? ಐಸ್ ಕ್ರೀಂ ತಿಂದಾಗಲೆಲ್ಲ ನಮಗೇಕೆ ಬಾಯಾರಿಕೆಯಾಗುತ್ತದೆ ಯಾಕೆ ಎಂದು ಯೋಚಿಸಿದ್ದೀರಾ. ಐಸ್ ಕ್ರೀಂ ತಿಂದ ನಂತರ ಎಷ್ಟೇ ಬಾಯಾರಿಕೆಯಾದರೂ ನೀರು ಕುಡಿಯಬಾರದು ಎನ್ನುವುದನ್ನು ನೆನಪಿನಲ್ಲಿಡಿ.
ಸಕ್ಕರೆಯಿಂದ ಕೂಡಿರುತ್ತದೆ
ಐಸ್ ಕ್ರೀಂನ ಒಂದು ಚಮಚವು ಸಕ್ಕರೆಯಿಂದ ತುಂಬಿರುತ್ತದೆ. ಐಸ್ಕ್ರೀಮ್ನ ಪ್ರತೀ ಚಮಚವೂ ಉತ್ತಮ ರುಚಿಯನ್ನು ಹೊಂದಿರುತ್ತದೆ. ಆದರೆ ಮತ್ತೊಂದೆಡೆ ಐಸ್ ಕ್ರೀಮ್ಗಳು ತ್ವರಿತವಾಗಿ ಕರಗುತ್ತವೆ ಮತ್ತು ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಕಿಣ್ವಗಳೊಂದಿಗೆ ಸಂಯೋಜಿಸಲು ಪ್ರಾರಂಭಿಸುತ್ತವೆ.
ಐಸ್ ಕ್ರೀಮ್ ತಿಂದ ನಂತರ ಬಾಯಾರಿಕೆಯಾಗುವುದು ಏಕೆ?
ಐಸ್ ಕ್ರೀಮ್ ತಿಂದ ನಂತರ ಬಾಯಾರಿಕೆಯಾಗಲು ವೈಜ್ಞಾನಿಕ ಕಾರಣವೂ ಇದೆ. ಸಂಶೋಧನೆಯ ಪ್ರಕಾರ, ಐಸ್ ಕ್ರೀಮ್ ಸಕ್ಕರೆ ಮತ್ತು ಸೋಡಿಯಂನಿಂದ ಮಾಡಲ್ಪಟ್ಟಿದೆ. ನೀವು ಐಸ್ ಕ್ರೀಂ ತಿಂದಾಗಲೆಲ್ಲ ಇವೆರಡೂ ರಕ್ತದಲ್ಲಿ ಬೆರೆತು ರಕ್ತವು ದೇಹದಲ್ಲಿ ಹರಡಲು ಪ್ರಾರಂಭಿಸುತ್ತದೆ. ಇದರ ನಂತರ ಜೀವಕೋಶಗಳು ನೀರನ್ನು ಹೀರಲು ಪ್ರಾರಂಭಿಸುತ್ತವೆ.
ಯಾವ ಸೀಸನ್ ಎಂಬುದನ್ನು ನೋಡದೆಯೇ ಐಸ್ ಕ್ರೀಮ್ ಅನ್ನು ತಿನ್ನಲು ಹಂಬಲಿಸುವ ಅನೇಕ ಜನರಿದ್ದಾರೆ. ಆದರೆ ಐಸ್ ಕ್ರೀಂ ತಿಂದ ನಂತರ ಸಾದಾ ನೀರು ಕುಡಿಯಬೇಕು ಅನ್ನಿಸುತ್ತದೆ. ಆದರೆ ಐಸ್ ಕ್ರೀಂ ತಿಂದ ತಕ್ಷಣ ನೀರು ಕುಡಿದರೆ ಗಂಟಲು ನೋವು ಆಗುತ್ತೆ ಅನ್ನೋದು ನಿಮಗೆ ತಿಳಿದಿದೆಯಾ ? ಐಸ್ ಕ್ರೀಂ ತಿಂದ ನಂತರ ನೀರು ಕುಡಿಯುವುದರಿಂದ ಹಲ್ಲು ನೋವು, ವಸಡು ನೋವು ಮೊದಲಾದ ಸಮಸ್ಯೆ ಸಹ ಉಂಟಾಗಬಹುದು,
ಐಸ್ ಕ್ರೀಮ್ ತಿಂದ ನಂತರ ನೀರನ್ನು ಯಾವಾಗ ಕುಡಿಯಬೇಕು?
ಆರೋಗ್ಯ ತಜ್ಞರ ಪ್ರಕಾರ ಐಸ್ ಕ್ರೀಮ್ ತಿಂದ ತಕ್ಷಣ ನೀರು ಕುಡಿಯಬಾರದು. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಐಸ್ ಕ್ರೀಮ್ ತಿಂದ ಕೆಲವೇ ನಿಮಿಷಗಳಲ್ಲಿ ನೀರು ಕುಡಿದರೆ ಗಂಟಲಿನಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಗಂಟಲು ನೋವು ಉಂಟಾಗಬಹುದು. ಈ ಕಾರಣದಿಂದಾಗಿ ಹಲ್ಲುಗಳಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅದಕ್ಕಾಗಿಯೇ ನೀವು ಐಸ್ ಕ್ರೀಮ್ ತಿಂದಾಗಲೆಲ್ಲಾ 15 ನಿಮಿಷಗಳ ನಂತರ ನೀರು ಕುಡಿಯಿರಿ.